ಯುವಕ ನಾಪತ್ತೆ : 30 ವರ್ಷಗಳ ಬಳಿಕ ದೂರು!

Picture of RB NEWS

RB NEWS

Bureau Report

ಕಾರ್ಕಳ : ಯುವಕನೊಬ್ಬ ನಾಪತ್ತೆಯಾಗಿ 30 ವರ್ಷಗಳ ಬಳಿಕ ಮನೆಮಂದಿ ಪೊಲೀಸ್ ಠಾಣೆಗೆ ದೂರು ನೀಡಿದ ಅಶ್ಚರಿ ಘಟನೆಯೊಂದು ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಪಳ್ಳಿ ಗ್ರಾಮದ ಬಂಡಸಾಲೆ ಮನೆಯಲ್ಲಿ ನಡೆದಿದೆ.

1995 ಎಪ್ರಿಲ್ 25ರಂದು ಈ ಘಟನೆ ನಡೆದಿತ್ತು.

ಉಡುಪಿ‌ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಸಮೀಪದ ನಿವಾಸಿ ಲಕ್ಷ್ಮಿನಾರಾಯಣ ಹೆಗ್ಡೆ (70) ಎಂಬವರು ಈ ಕುರಿತು ಕಾರ್ಕಳ ನಗರ ಠಾಣೆಗೆ ದೂರು ‌ನೀಡಿದ್ದಾರೆ.

ಈ ಪ್ರಕರಣದ ಸಾರಾಂಶವೇನೆಂದರೆ, ಫಿರ್ಯಾದುದಾರರ ಸಹೋದರ ಗೋಪಾಲಕೃಷ್ಣ ಹೆಗ್ಡೆ ( 68 ) ಎಂಬವರು ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಬಂಡಸಾಲೆ ಎಂಬಲ್ಲಿ ವಾಸವಾಗಿದ್ದು, ಸುಮಾರು 30 ವರ್ಷ ಗಳ ಹಿಂದೆ ತನ್ನ ಮನೆಯಾದ ಪಳ್ಳಿ ಬಂಡಸಾಲೆ ಎಂಬಲ್ಲಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ. ಕಾಣೆಯಾಗಿರುತ್ತಾರೆ.

ನಾಪತ್ತೆಯಾಗಿರುವ ಗೋಪಾಲಕೃಷ್ಣ ಹೆಗ್ಡೆ ಅವಿವಾಹಿರಾಗಿದ್ದು, ಸಾಧಾರಣ ಶರೀರ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಪ್ಯಾಂಟ್‌ ಶರ್ಟ್‌ ಧರಿಸಿರುತ್ತಾರೆ. 5 ʻ 10 ಅಡಿ ಎತ್ತರ ಹೊಂದಿದ್ದು, ತುಳು ಕನ್ನಡ ಭಾಷೆ ಸಂಭಾಷಿಸಬಲ್ಲವರಾಗಿದ್ದು, ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಈ ಕುರಿತು ಮಾಹಿತಿ ಲಭಿಸಿದರೆ ಕಾರ್ಕಳ ನಗರಠಾಣೆಯನ್ನು ಸಂಪರ್ಕಿಸಬಹುದಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top