











ಯುವಕ ನಾಪತ್ತೆ : 30 ವರ್ಷಗಳ ಬಳಿಕ ದೂರು!
ಕಾರ್ಕಳ : ಯುವಕನೊಬ್ಬ ನಾಪತ್ತೆಯಾಗಿ 30 ವರ್ಷಗಳ ಬಳಿಕ ಮನೆಮಂದಿ ಪೊಲೀಸ್ ಠಾಣೆಗೆ ದೂರು ನೀಡಿದ ಅಶ್ಚರಿ ಘಟನೆಯೊಂದು ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಪಳ್ಳಿ ಗ್ರಾಮದ ಬಂಡಸಾಲೆ ಮನೆಯಲ್ಲಿ ನಡೆದಿದೆ.
1995 ಎಪ್ರಿಲ್ 25ರಂದು ಈ ಘಟನೆ ನಡೆದಿತ್ತು.
ಉಡುಪಿ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಸಮೀಪದ ನಿವಾಸಿ ಲಕ್ಷ್ಮಿನಾರಾಯಣ ಹೆಗ್ಡೆ (70) ಎಂಬವರು ಈ ಕುರಿತು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣದ ಸಾರಾಂಶವೇನೆಂದರೆ, ಫಿರ್ಯಾದುದಾರರ ಸಹೋದರ ಗೋಪಾಲಕೃಷ್ಣ ಹೆಗ್ಡೆ ( 68 ) ಎಂಬವರು ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಬಂಡಸಾಲೆ ಎಂಬಲ್ಲಿ ವಾಸವಾಗಿದ್ದು, ಸುಮಾರು 30 ವರ್ಷ ಗಳ ಹಿಂದೆ ತನ್ನ ಮನೆಯಾದ ಪಳ್ಳಿ ಬಂಡಸಾಲೆ ಎಂಬಲ್ಲಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ. ಕಾಣೆಯಾಗಿರುತ್ತಾರೆ.
ನಾಪತ್ತೆಯಾಗಿರುವ ಗೋಪಾಲಕೃಷ್ಣ ಹೆಗ್ಡೆ ಅವಿವಾಹಿರಾಗಿದ್ದು, ಸಾಧಾರಣ ಶರೀರ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಪ್ಯಾಂಟ್ ಶರ್ಟ್ ಧರಿಸಿರುತ್ತಾರೆ. 5 ʻ 10 ಅಡಿ ಎತ್ತರ ಹೊಂದಿದ್ದು, ತುಳು ಕನ್ನಡ ಭಾಷೆ ಸಂಭಾಷಿಸಬಲ್ಲವರಾಗಿದ್ದು, ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಈ ಕುರಿತು ಮಾಹಿತಿ ಲಭಿಸಿದರೆ ಕಾರ್ಕಳ ನಗರಠಾಣೆಯನ್ನು ಸಂಪರ್ಕಿಸಬಹುದಾಗಿದೆ.
ಆಸ್ತಿಯ ವಿಂಗಡಣೆಯಲ್ಲಿ ಹೆಚ್ಚಿನ ಮಹತ್ವ!
ವಂಶಪಾರಂಪರೆಯಾಗಿ ಬಂದಿರುವ ಆಸ್ತಿ ವಿಂಗಡನೆಯ ಸಂದರ್ಭದಲ್ಲಿ ಕುಟುಂಬಿಕರ ವಂಶವೃಕ್ಷದ ಕುರಿತು ಮಾಹಿತಿ ಹಾಗೂ ದಾಖಲೆಗಳು ಇರಲೇ ಬೇಕಾಗುತ್ತದೆ.
ಕುಟುಂಬದ ಸದಸ್ಯರು ಮೃತಪಟ್ಟಿದಲ್ಲಿ ಮರಣ ದೃಢೀಕರಣ ಪತ್ರ ಅಗತ್ಯವಾಗಿರುತ್ತದೆ.
ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದರೆ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಕುರಿತು ದಾಖಲೆಗಳು ಹಾಗೂ ಪೊಲೀಸ್ ವರದಿಯೂ ಕೂಡಾ ಅಗತ್ಯ ಆಗಿರುತ್ತದೆ. ಕಾನೂನು ತಜ್ಞರ ಸಲಹೆಯೊಂದಿಗೆ ಸಮಸ್ಸೆಗೆ ಇತ್ಯರ್ಥ ಕಾಣಬಹುದು.






































