ಯಕ್ಷಗಾನ ಸ್ಪರ್ಧೆಯಲ್ಲಿ ಕಾರ್ಕಳ ಯಕ್ಷ ಕಲಾರಂಗ ಕ್ಕೆ ತೃತೀಯ ತಂಡ ಪ್ರಶಸ್ತಿ
ಕಾರ್ಕಳ: ಮೇ 12 ರಂದು ವಾಮಂಜೂರಿನ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದವರು ದಶಮಾನ ಸಂಭ್ರಮದ ಪ್ರಯುಕ್ತ ನಡೆದ ಹವ್ಯಾಸಿ ಯಕ್ಷಗಾನ ಬಯಲಾಟ ಸ್ಪರ್ಧೆಯಲ್ಲಿ ಕಾರ್ಕಳದ ಪ್ರೊ ಪದ್ಮನಾಭ ಗೌಡರ ಸಂಚಾಲಕತ್ವದ ಯಕ್ಷ ಶಿಕ್ಷಣ ಸಂಸ್ಥೆ ಯಕ್ಷ ಕಲಾರಂಗ ರಿ. ತಂಡವು ಕಾಂತಾವರ ಮಹಾವೀರ ಪಾಂಡಿಯವರ ನಿರ್ದೇಶನದಲ್ಲಿ ಕವಿ ನಂದಳಿಕೆ ಮುದ್ದಣ ವಿರಚಿತ ಕುಮಾರ ವಿಜಯ ಪ್ರಸಂಗಕ್ಕೆ ತೃತೀಯ ತಂಡ ಪ್ರಶಸ್ತಿ ಪಡೆದಿರುತ್ತದೆ .ಮತ್ತು ಪ್ರತ್ಯೇಕ ವಿಭಾಗದಲ್ಲಿ ಉತ್ತಮ ಬಣ್ಣದ ವೇಷ ಸಾತ್ವಿಕ್ ನೆಲ್ಲಿತೀರ್ಥ ಪ್ರಥಮ,, ಉತ್ತಮ ರಾಜವೇಷ ಅಮೃತ್ ಪುತ್ತಿಗೆ ದ್ವಿತೀಯ,, ಉತ್ತಮ ಹಾಸ್ಯ ಪಾತ್ರ ಸಾತ್ವಿಕ್ ಅಜೆಕಾರು ದ್ವಿತೀಯ ಹಾಗೂ ಉತ್ತಮ ಪುಂಡುವೇಷ ತೃತೀಯ ಬಹುಮಾನ ಪಡೆದಿರುತ್ತಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕಲಾವಿದರನ್ನು ಸಂಸ್ಥೆಯ ಪರವಾಗಿ ವಿಜಯ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಅಭಿನಂದಿಸಲಾಯಿತು.
ಕೋಶಾದ್ಯಕ್ಷರಾದ ನಿ. ಪಾಚಾರ್ಯ ಶ್ರೀವರ್ಮ ಅಜ್ರಿ, ಪ್ರಾಂಶುಪಾಲ ಬೇಬಿ ಕೆ. ಈಶ್ವರಮಂಗಲ, ಅದ್ಯಾಪಕ ಶಿವ ಸುಭ್ರಹ್ಮಣ್ಯ ಭಟ್,
ಭಾಗವತ ಮಹೇಶ್ ಕನ್ಯಾಡಿ, ಹಿಮ್ಮೇಳ ಕಲಾವಿದ ಶಿತಿಕಂಠ ಭಟ್ ಉಜಿರೆ, ರವಿರಾಜ್ ಜೈನ್ ಕಾರ್ಕಳ, ಕಲಾವಿದರಾದ ಮನೋಹರ ಹಿರಿಯಡ್ಕ, ಲೋಹಿತ್ ಎಸ್ ಕೆ, ವೆಂಕಟೇಶ್ ಕಾರ್ಕಳ, ಸಾತ್ವಿಕ್ ನೆಲ್ಲಿತೀರ್ಥ, ಅಮೃತ್ ಪುತ್ತಿಗೆ, ಶಬರೀಶ ಮುನಿಯಾಲ್, ಸಂದೇಶ್ ಭಟ್ , ಸಾತ್ವಿಕ್ ಅಜೆಕಾರು, ಪ್ರಹಲ್ಲಾದ ಮೂರ್ತಿ ಕಡಂದಲೆ ಉಪಸ್ಥಿತರಿದ್ದರು.





































