ಯಕ್ಷಗಾನ ತರಬೇತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು

Picture of RB NEWS

RB NEWS

Bureau Report

ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು -1 ಮತ್ತು ಯಕ್ಷ ಕಲಾ ರಂಗ (ರಿ.) ಕಾರ್ಕಳ ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ಸಹಯೋಗದೊಂದಿಗೆ ನಡೆಯುವ ಯಕ್ಷಗಾನ ತರಬೇತಿ ಕಾರ್ಯಗಾರವನ್ನು ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಾಮ ಭಟ್ ಇವರು ನೆರವೇರಿಸಿದರು.

ಉದ್ಘಾಟನಾ ಸಮಾರಂಭ , ಸರಕಾರದಿಂದ ವಿದ್ಯಾರ್ಥಿಗಳಿಗೆ ಕೊಡಲಾಗುವ ಸಮವಸ್ತ್ರ ವಿತರಣೆ, ಮತ್ತು ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಕೊಡ ಮಾಡುವ ನೋಟ್ಸ್ ಪುಸ್ತಕ, ಲೇಖನಿ ಸಾಮಗ್ರಿಗಳ ವಿತರಣಾ ಸಮಾರಂಭ ಹಾಗೂ ಶಾಲೆಗೆ ಪ್ರಿಂಟರ್ ನ ಹಸ್ತಾಂತರ ಕಾರ್ಯಕ್ರಮವು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಯಕ್ಷಕಲಾ ರಂಗದ ಸಂಚಾಲಕ ಪದ್ಮನಾಭ ಗೌಡ, ಅಧ್ಯಕ್ಷ ವಿಜಯ ಶೆಟ್ಟಿ, ಕೋಶಾಧ್ಯಕ್ಷರಾದ ಶ್ರೀ ವರ್ಮ ಅಜ್ರಿ, ಯಕ್ಷಗಾನದ ಗುರು ಗಣೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಸರಸ್ವತಿ, ಸುನಂದ ನಾಯ್ಕ್, ಭಾಗವಹಿಸಿದ್ದರು.

ಸಾಣೂರು ಸಮೂಹ ಸಂಪನ್ಮೂಲ ವ್ಯಕ್ತಿಯಾದ ಜ್ಯೋತಿ ನಾಯಕ್ ಇವರು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹಾಗೂ ಯಕ್ಷ ಕಲಾ ರಂಗ (ರಿ.) ಕಾರ್ಕಳ ಇದರ ಕಾರ್ಯದರ್ಶಿಯವರಾದ ಮಹಾವೀರ ಪಾಂಡಿ ಅವರು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪ್ರಸ್ತಾವಿಕವಾಗಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ ವಿಶ್ವನಾಥ ಶೆಟ್ಟಿ, ಯುವಕ ಮಂಡಲ (ರಿ.) ಸಾಣೂರು ಇದರ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಅಂಚೆ ಇಲಾಖೆಯ ನಿವೃತ್ತ ಅಧೀಕ್ಷಕ ಸತ್ಯಾರ್ಥಿ ಎಸ್, ಶಂಕರ್ ಶೆಟ್ಟಿ ಕೊಲ್ರೊಟ್ಟು, ಸುಧಾಕರ್ ಶೆಟ್ಟಿ ಓಂಕಾರ್, ಆನಂದ ಶೆಟ್ಟಿ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಅರುಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಶಿಕ್ಷಕರಾದ ಹರಿಣ ದೇವಾಡಿಗ, ಸರೋಜಿನಿ. ಕೆ. ಸರಕಾರದ ಸಮವಸ್ತ್ರ ಹಾಗೂ ದಾನಿಗಳ ನೆರವಿನಿಂದ ನೀಡುವ ನೋಟ್ ಪುಸ್ತಕದ ವಿವರವನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ದಾನಿಗಳ ಸಹಕಾರದಿಂದ ಸುಮಾರು 48000.00 ಮೌಲ್ಯದ ನೋಟ್ ಪುಸ್ತಕ, ಡ್ರಾಯಿಂಗ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಿಸಲಾಯಿತು. 16000.00 ಮೌಲ್ಯದ ಪ್ರಿಂಟರ್ ನ್ನು ಶಾಲೆಗೆ ಹಸ್ತಾಂತರಿಸಲಾಯಿತು.

ಪ್ರಭಾರ ಮುಖ್ಯ ಶಿಕ್ಷಕಿ ಕಲಾವತಿ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲ ಬಿ. ಡಿಮೆಲ್ಲೊ ವಂದಿಸಿದರು. ಗ್ರಾಮ ಪಂಚಾಯತ್ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ರಾವ್ ಸಾಣೂರು ಕಾರ್ಯಕ್ರಮ ನಿರ್ವಹಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top