ಭಾಗ-16
‘ಮೃತದೇಹದ ಖಾಸಗಿ ಅಂಗ ಸುನ್ನತ್ ಆಗಿತ್ತು’
ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣದ ವಿಚಾರಣೆಯು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮುಂದುವರಿಯುತ್ತಿದ್ದoತೆಯೇ ಇಸ್ಮಾಯಿಲ್ ಅವರ ಮೃತದೇಹದ ಗುರುತು ದೃಢಪಡಿಸುವಂತಹ ಮಹತ್ವದ ಸಾಕ್ಷಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಸುರೇಂದ್ರ ಶೆಟ್ಟಿಯವರು. ಅವರ ಹೇಳಿಕೆ ಈ ರೀತಿ ಇದೆ. 65ನೇ ಸಾಕ್ಷಿ ಡಾ. ಸುರೇಂದ್ರ ಶೆಟ್ಟಿಯವರು ನ್ಯಾಯಾಲಯದಲ್ಲಿ ಹೇಳಿಕೆ ನೀಡುತ್ತಾನಾನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 9-9-76ರಂದು ಬೆಳಗಿನ ಜಾವ ಸುಮಾರು 3 ಅಥವಾ 3.30ಗಂಟೆ ಸಮಯ ಪುತ್ತೂರು ಡಿವೈಎಸ್ಪಿ ಯವರಿಂದ, ನೇತ್ರಾವತಿ ನದಿ ಮಧ್ಯದಲ್ಲಿ ದೊರಕಿರುವ ಇಸ್ಮಾಯಿಲ್ ಅವರ ಹೆಣದ ಶವ ಪರೀಕ್ಷೆ ನಡೆಸಲು ಸ್ಥಳಕ್ಕೆ ಹೋಗಬೇಕೆಂದು ಇಂಟಿಮೇಶನ್ ಸಿಕ್ಕಿತು. ಆ ಪ್ರಕಾರ ಸುಮಾರು 5 ಅಥವಾ 5.30 ಗಂಟೆ ಹೊತ್ತಿಗೆ ಬಂಟ್ವಾಳ ಸಬ್ಇನ್ಸ್ಪೆಕ್ಟರ್ರ ಜೊತೆಯಲ್ಲಿ ಹೊಳೆ ಬದಿಗೆ ಹೋಗಿ ಅಲ್ಲಿಂದ ದೋಣಿಯ ಮೂಲಕ ಹೆಣವಿದ್ದ ಸ್ಥಳಕ್ಕೆ ಹೋದೆ. ಅಲ್ಲಿ ಪುತ್ತೂರು ಡಿವೈಎಸ್ಪಿಯವರು ಶವದ ಬಗ್ಗೆ ಇನ್ಕ್ವೆಸ್ಟ್ ಪ್ರೊಸೀಡಿಂಗ್ಸ್ ಮಾಡುತ್ತಿದ್ದರು’ ಎಂದು ಹೇಳಿದರು.
ಮುಂಜಿಯಾದ ವ್ಯಕ್ತಿಯ ಶವ
ಆ ಬಳಿಕ ಮರಣೊತ್ತರ ಪರೀಕ್ಷೆಗಾಗಿ ಶವವನ್ನು ತಮಗೆ ಕೊಟ್ಟರೆಂದು ಹೇಳಿದ ಡಾ. ಶೆಟ್ಟಿಯವರು ಶವದ ಕುತ್ತಿಗೆಯಲ್ಲಿದ್ದ ನೈಲಾನ್ ಬಳ್ಳಿ ಮತ್ತು ಹುರಿ ಹಗ್ಗವನ್ನು ತುಂಡು ಮಾಡಿ ಅದನ್ನು ಪೊಲೀಸರ ವಶಕ್ಕೆ ಕೊಟ್ಟೆ. ಅನಂತರ ಶವ ಪರೀಕ್ಷೆ ಮಾಡಲು ಶುರು ಮಾಡಿದೆ. ಅದು ಮುಂಜಿಯಾದ (ಸುನ್ನತಿ) ವ್ಯಕ್ತಿಯ ಶವವಾಗಿತ್ತು. ಹೆಚ್ಚಾಗಿ ಮುಸ್ಲಿಮರು ಇದನ್ನು ಮಾಡಿಸುತ್ತಾರೆ. ಆದರೆ ಇತ್ತೀಚೆಗೆ ಇತರರು ಕೂಡಾ ಆರೋಗ್ಯ ಮತ್ತಿತರ ದೃಷ್ಟಿಯಿಂದ ಇದನ್ನು (ಮುಂಜಿ) ಮಾಡಿಸುತ್ತಾರೆ’ ಎಂಬುದಾಗಿ ವಿವರಿಸಿದರು. ಶವದ ಕುತ್ತಿಗೆಯಲ್ಲಿ ಹಗ್ಗವು ಬಿಗಿದ ಗುರುತು ಇತ್ತು, ಶವದ ಮೇಲಿನ ತೊಗಲು ಅಲ್ಲಲ್ಲಿ ಹೋಗಿತ್ತು, ಶವದ ಕೈಗಳು ಅಡ್ಡಕ್ಕೆ ಚಾಚಿದ್ದವು. ಹೊಟ್ಟೆಯ ಹೊಕ್ಕಳ ಭಾಗದಲ್ಲಿ ಜಲಚರ ಪ್ರಾಣಿಗಳು ಸ್ವಲ್ಪ ತಿಂದAತೆ ಕಾಣುತ್ತಿತ್ತು. ಆಮೇಲೆ ಶವದ ಒಳ ಭಾಗದ ಪರೀಕ್ಷೆ ನಡೆಸಿದೆ. ಕುತ್ತಿಗೆಯ ಥೈರಾಯ್ಡ್ ಬೋನ್ ತುಂಡಾಗಿತ್ತು. ಹೊಟ್ಟೆಯಲ್ಲಿ ಅರ್ಧ ಜೀರ್ಣ ಹೊಂದಿದ ಆಹಾರವಿತ್ತು. ಇದನ್ನು ಮತ್ತು ಶವದ ಹೊಟ್ಟೆಯ ಅಂತರ್ ಅವಯವಗಳು ಮೊದಲಾದವುಗಳನ್ನು ಮುಂದಿನ ತನಿಖೆಯ ಬಗ್ಗೆ ಬಾಟ್ಲಿಯಲ್ಲಿ ಹಾಕಿ ಪೊಲೀಸರ ವಶಕ್ಕೆ ಕೊಟ್ಟೆ’ ಎಂದು ಡಾ. ಶೆಟ್ಟಿ ವಿವರಿಸಿದರು.
ಪರಿಚಯ ಹಿಡಿಯಲು ಸಾಧ್ಯವಿತ್ತು
ಮೃತನಿಗೆ ಮೇಲೆ ಹೇಳಿದ ಗಾಯಗಳು ಈ ಕೇಸಿನ ಎಂ. ಓ. 2 ಎಂದು ಗುರುತಿಸಲಾದ ನೈಲಾನ್ ಹಗ್ಗದಿಂದ ಆಗಲು ಸಾಧ್ಯವಿದೆಯೆಂದು ತಿಳಿಸಿದ ಡಾಕ್ಟರರು ಮೇಲೆ ಹೇಳಿದ ಗಾಯಗಳೆಲ್ಲ ಸಾಯುವ ಮೊದಲೇ ಆದ ಗಾಯಗಳು. ಮೃತರು ಸಾಯುವುದರ 3 ಗಂಟೆಯ ಮೊದಲು ಆಹಾರ ಸೇವಿಸಿದ್ದರು. ಶವ ಪರೀಕ್ಷೆಯನ್ನು ಮಾಡುವುದಕ್ಕಿಂತ 86 ಗಂಟೆಗಳಿಗಿAತಲೂ ಮುಂಚೆ ಸತ್ತಿರಬೇಕು ಮತ್ತು ಮೃತರನ್ನು ಮೊದಲು ಪರಿಚಯ ಇದ್ದವರಿಗೆ ಮೃತ ದೇಹವನ್ನು ನೋಡಿ ಪರಿಚಯ ಹಿಡಿಯಲು ಸಾದ್ಯವಿರುವ ಸ್ಥಿತಿಯಲ್ಲಿತ್ತು’ ಎಂದು ಹೇಳಿದರು.
ಇಷ್ಟು ಮಾತ್ರವಲ್ಲದೆ ಮೃತ ದೇಹವು ತಣ್ಣೀರಿನಲ್ಲಿದ್ದರೆ ಡೀಕಂಪೋಸ್’ ಆಗುವುದು ನಿಧಾನವಾಗುತ್ತದೆಂದೂ, ಅಂದು ಬೆಳಿಗ್ಗೆ ನಾನು ಅಲ್ಲಿಗೆ ಹೋಗಿ ನೋಡಿದಾಗ ಹೊಳೆಯ ನೀರು ತಣ್ಣಗೆ ಇತ್ತೆಂದೂ ಸಾಕ್ಷಿ ಹೇಳಿದರು. ಅಡ್ಡ ವಿಚಾರಣೆಯಲ್ಲಿನಾನು ಹೆಣದ ತಲೆಯನ್ನು ತೆರೆದು ಅಂದರೆ ಹಣೆಯಿಂದ ಬಿಡಿಸಿ ತಲೆಯ ಒಳಗಿನ ಭಾಗಗಳನ್ನು ಪರೀಕ್ಷಿಸಿದೆ. ಹೆಣದ ಗಲ್ಲದ ಕೆಳಭಾಗಗಳಿಂದ ಹೊಟ್ಟೆಯ ಕೆಳಭಾಗದವರೆಗೆ ಸಿಗಿದು ಒಳಗಿನÀ ಭಾಗಗಳನ್ನು ಪರೀಕ್ಷಿಸಿದೆ. ಸತ್ತ ಮೇಲೆ ಹೆಣವು 36 ಗಂಟೆಗಳಿAದ ಹೆಚ್ಚು ಕಾಲ ಇದ್ದರೆ ಅದು ಹೆಚ್ಚು ಊತಿರುತ್ತದೆ. ಹೆಣವು ನೀರಿನಲ್ಲಿ 30-40 ಡಿಗ್ರಿ ಎಫ್.ಎಚ್. ಉಷ್ಣತೆಯಲ್ಲಿ ಮಾತ್ರ ಬೇಗನೆ ಕೊಳೆಯದೆ ಇರುತ್ತದೆ. ಹೆಣದಲ್ಲಿ ಅಲ್ಲಲ್ಲಿ ಚರ್ಮ ಸುಲಿದು ಹೋಗಿದ್ದ ಕಾರಣ ಶವವು ಮೊದಲು ಪರಿಚಯವಿದ್ದವರಿಗೂ ಪಕ್ಕನೆ ಗುರುತು ಹಿಡಿಯಲು ಕಷ್ಟವಾಗುವಂತಿತ್ತು’ ಎಂದು ವಿವರಿಸಿದರು.
ಶವವು ನೀರಿನಲ್ಲಿದ್ದರೆ ಜಲಚರ ಪ್ರಾಣಿಗಳು ತಿಂದು ಹಾಳು ಮಾಡುವುದಿಲ್ಲವೇ? ಎಂಬ ಆರೋಪಿ ಪರ ವಕೀಲರ ಪ್ರಶ್ನೆಗೆನೀರಿನಲ್ಲಿ ಏಡಿಗಳು ಇದ್ದರೆ ಮತ್ತು ತಿಂದರೆ ಹಾಗಾಗಬಹುದು’ಎಂದು ಡಾಕ್ಟರರು ಹೇಳಿದರು. ಶವ ಪರೀಕ್ಷೆ ಸಮಯದಲ್ಲಿ ತಾವು ಶವದ ಕಣ್ಣುಗಳ ವಿಷಯದಲ್ಲಿ ಏನನ್ನೂ ಮರಣೋತ್ತರ ಶಸ್ತç ಪರೀಕ್ಷೆ ವರದಿಯಲ್ಲಿ ಬರೆದಿರಲಿಲ್ಲ ಎಂಬುದನ್ನು ಡಾಕ್ಟರರು ಒಪ್ಪಿಕೊಂಡರು. ಶವದ ಗಂಟಲಲ್ಲಿ ಒತ್ತಿದ ಕುರುಹು ಸುತ್ತಲೂ ಇಲ್ಲದೆ, ಸ್ವಲ್ಪ ಭಾಗ ಬಿಟ್ಟಿದ್ದರೆ, ಅದು ನೇಣು ಹಾಕಿಕೊಂಡು ಸತ್ತರೂ ಹಾಗೆ ಇರುತ್ತದೆಂದು ಹೇಳಿದ ಅವರು, ಮೃತರ ಶವದಲ್ಲಿ ಕೂಡಾ ಬಲ ಬದಿಯಲ್ಲಿ ಸ್ವಲ್ಪ ಸುಮಾರು ಒಂದೂವರೆ ಇಂಚುಗಳಷ್ಟು ಉದ್ದಕ್ಕೆ ಗಾಯ ಇದ್ದಿರಲಿಲ್ಲವೆಂದು ಹೇಳಿದರು. ಈ ಸಂಬAಧ ಪಬ್ಲಿಕ್ ಪ್ರಾಸಿಕ್ಯೂಟರ್ ಕೇಳಿದ ಪ್ರಶ್ನೆಯೊಂದಕ್ಕೆ ಡಾಕ್ಟರ್ ಉತ್ತರಿಸುತ್ತಾ ಹಗ್ಗ ಬಿಗಿದ ಮೇಲೆ ಯಾವುದಾದರೊಂದು ಭಾರದ ವಸ್ತುವನ್ನು ಅದಕ್ಕೆ ನೇತಾಡಿಸಿದರೆ ಹಾಗೆ ಗಂಟಲಿನ ಸುತ್ತಲೂ ಒತ್ತಿದ ಗುರುತು ಇಲ್ಲದಿರಲು ಸಾಧ್ಯವಾಗಬಹುದೆಂದು ವಿವರಣೆ ನೀಡಿದರು.ನೀವು ಅಲ್ಲಿಗೆ ಹೋಗಿ ಶವವನ್ನು ನೋಡಿದಾಗ ಆ ಹಗ್ಗದ ತುದಿಗೆ ಯಾವುದೇ ಭಾರವಾದ ವಸ್ತುವನ್ನು ಕಟ್ಟಿದುದನ್ನು ನೋಡಿದ್ದೀರಾ” ಎಂದು ನ್ಯಾಯಾಧೀಶರು ಕೇಳಿದಾಗ ಸಾಕ್ಷಿಇಲ್ಲ’ ಎಂದರು.
ಶವ ಪರೀಕ್ಷೆ ನಡೆದ ಕೂಡಲೇ ತಾವೇ ಶವ ಪರೀಕ್ಷೆಗಾಗಿ ಮಾಡಿದ ಗಾಯಗಳನ್ನು ಹೊಲಿದು ಆಮೇಲೆ ಅದನ್ನು ಸಂಬAಧಿಕರಿಗೆ ಬಿಟ್ಟುಕೊಡಲಾಯಿತೆಂದು ಸಾಕ್ಷಿ ಹೇಳಿದರು.
66ನೇ ಸಾಕ್ಷಿ ಬಂಟ್ವಾಳದ ಅಬ್ದುಲ್ ರಹಿಮಾನ್ ಅವರು ತಮ್ಮ ಹೇಳಿಕೆಯಲ್ಲಿ ಬೆಳ್ತಂಗಡಿ ಹೆಡ್ಕಾನ್ಸ್ಟೇಬಲ್ ಕೃಷ್ಣ ಭಟ್ರವರು ಸಿಓಡಿ ಡಿಎಸ್ಪಿಯವರ ಮುಂದೆ ಒಂದು ಬಟ್ಟೆಯ ಕಟ್ಟನ್ನು ಹಾಜರುಪಡಿಸಿದಾಗ ಅದನ್ನು ಮಹಜರು ಮೂಲಕ ಡಿಎಸ್ಪಿಯವರು ಸ್ವಾಧೀನಕ್ಕೆ ತೆಗೆದುಕೊಳ್ಳುವಾಗ ನಾನು ಹಾಜರಿದ್ದೆ. ಅದಕ್ಕೆ ನಾನೂ ಸಹಿ ಹಾಕಿದ್ದೆ. ತಾ. 5-4-77ರಂದು ಐದನೇ ಆರೋಪಿ ಭೋಜರಾಜ ಸೇಮಿತ ಅವರು ಒಂದು ಕಾಗದದ ಆರು ಪ್ರತಿಗಳನ್ನು ಮಾಡುವಾಗ ನಾನಿದ್ದೆ. ಆ ಪ್ರತಿಗಳಿಗೆಲ್ಲ ನಾನು ಸಹಿ ಹಾಕಿರುತ್ತೇನೆ. ಅವುಗಳನ್ನೆಲ್ಲ ಒಂದು ಯಾದಾಸ್ತು ಮುಖೇನ ಸ್ವಾಧೀನಪಡಿಸಿದರು’ ಎಂದು ಹೇಳಿದರು. ಇವರಿಗೆ ಅಡ್ಡ ವಿಚಾರಣೆ ಇರಲಿಲ್ಲ. ಬಂಟ್ವಾಳ ಕೋರ್ಟಿನಲ್ಲಿ ಕೇಸು 67ನೇ ಸಾಕ್ಷಿ ಬಿ.ಪಿ. ನಾಯರ್ ಹೇಳಿಕೆ ನೀಡುತ್ತಾ ನಾನು ತಾ. 15-11-72ರಿಂದ 1-8-74ರವರೆಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದೆ. ತಾ. 27-4-74ರಂದು ಸಚಿವ ರಂಗನಾಥ್ ಅವರು ಬಂದ ಸಮಯ ಕಲ್ಲಡ್ಕದಲ್ಲಿ ಆದ ಗಲಾಟೆಯ ವಿಷಯ ಎಫ್.ಐ. 87/74 ನಂಬ್ರದಲ್ಲಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ನಾನು ರಿಜಿಸ್ಟಿç ಮಾಡಿದ್ದೇನೆ. ಆಮೇಲೆ ಘಟನೆಯ ಕುರಿತು ತನಿಖೆ ಮಾಡಿ ಆ ಸಂಬAಧ 30 ಮಂದಿಯ ಮೇಲೆ ಚಾರ್ಜ್ಶೀಟ್ ಹಾಕಿದ್ದೆ. ಈ ಕೇಸಿನ 2ನೇ ಆರೋಪಿಯು ಈ ಕೇಸಿನ 3ನೇ ಆರೋಪಿಯಾಗಿಯೂ, ಈ ಕೇಸಿನ ನಾಲ್ಕನೇ ಆರೋಪಿಯು ಈ ಕೇಸಿನ 12ನೇ ಆರೋಪಿಯಾಗಿಯೂ ಇದ್ದರು. ಡಾ. ಪ್ರಭಾಕರ ಭಟ್ಟರೂ ಆ ಕೇಸಿನಲ್ಲಿ 2ನೇ ಆರೋಪಿಯಾಗಿದ್ದರು’ ಎಂದು ವಿವರಿಸಿದರು.
ಅಷ್ಟು ಮಾತ್ರವಲ್ಲದೆ ಕೆ. ಎಂ. ಇಸ್ಮಾಯಿಲ್ ಮತ್ತು ಕಲ್ಲಡ್ಕದ ಸದಾನಂದ ಪೈಯವರು ಆ ಕೇಸಿನಲ್ಲಿ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿದ್ದರೆಂದು ಅವರು ಹೇಳಿದರು. ಆ ಬಗ್ಗೆ ಎಫ್.ಐ.ಆರ್ ಚಾರ್ಜ್ಶೀಟ್ ಹಾಗೂ ಮ್ಯಾಜಿಸ್ಟೆçÃಟ್ರವರ ಆದೇಶಗಳ ಮಂಜೂರು ನಕಲುಗಳನ್ನು ಇವರ ಮೂಲಕ ಕೋರ್ಟಿಗೆ ಹಾಜರುಪಡಿಸಲಾಯಿತು. ಇವರಿಗೂ ಅಡ್ಡ ವಿಚಾರಣೆ ಇರಲಿಲ್ಲ.
ಬಾವಿಯಲ್ಲಿ ನಂಬರ್ ಪ್ಲೇಟು
68ನೇ ಸಾಕ್ಷಿ ಮಾಯಾರಂಗಯ್ಯರವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುತ್ತಾನಾನು ಸಿಓಡಿ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತೇನೆ. ತಾ 23-2-77ರಲ್ಲಿ ಸಿಓಡಿ ಡಿಎಸ್ಪಿಯವರು ನನ್ನನ್ನು ಬಡಕಾಯಿಕೊಂಬುವಿಗೆ ಹೋಗುವಂತೆ ಆದೇಶ ನೀಡಿದರು. ಅದರಂತೆ ನಾನು ಬಡಕಾಯಿಕೊಂಬುವಿನಲ್ಲಿರುವ 2ನೇ ಆರೋಪಿ ಪುರಂದರ ಭಟ್ಟರ ಮನೆಯ ಹತ್ತಿರಕ್ಕೆ ಹೋದೆ. ಅಲ್ಲಿ ಫಾಯರ್ ಸರ್ವೀಸ್ನಿಂದ ಬಂದ ಸಿಬ್ಬಂದಿಯವರ ಸಹಯದಿಂದ ಆ ಮನೆಯ ಹತ್ತಿರವಿರುವ ಬಾವಿಯ ನೀರನ್ನು ಆರಿಸಿದೆವು. ಆ ಬಳಿಕ ಫಾಯರ್ಮ್ಯಾನ್ ನಾರಾಯಣ ಎಂಬವರು ಬಾವಿಗಿಳಿದು ಒಂದು ನಂಬರ್ ಪ್ಲೇಟನ್ನು ಮೇಲಕ್ಕೆ ತಂದರು. ಮನೆಯೊಳಗಿಂದ ಒಂದು ಹೊಲಿಗೆ ಯಂತ್ರದ ತಲೆ ಮತ್ತು ಕವರನ್ನು ಸ್ವಾಧೀನ ಪಡಿಸಿಕೊಂಡೆ. ಈ ಬಗ್ಗೆ ಎಲ್ಲಾ ಒಂದು ಮಹಜರು ತಯಾರುಮಾಡಿದೆ’ ಎಂದು ತಿಳಿಸಿದರು. ಅಡ್ಡ ವಿಚಾರಣೆಯಲ್ಲಿ ಕಾವಳಕಟ್ಟೆ ಎಂಬ ಸ್ಥಳಕ್ಕೂ, ಬಡಕಾಯಿಕೊಂಬುವಿನಲ್ಲಿರುವ 2ನೇ ಆರೋಪಿಯ ಮನೆಗೂ 2 ಮೈಲು ದೂರ ಇದೆಯೆಂದೂ, 2ನೇ ಆರೋಪಿಯ ಮನೆಯಿಂದ ಎರಡು ಅಥವಾ ಎರಡೂವರೆ ಫರ್ಲಾಂಗು ದೂರದಲ್ಲಿ ಸಣ್ಣ ಗುಡಿಸಲುಗಳು ಇವೆಯೆಂದೂ, ಬಾವಿಯಲ್ಲಿ ಸಿಕ್ಕಿದ ನಂಬರ್ ಪ್ಲೇಟ್ನಲ್ಲಿ ಬೆರಳಚ್ಚುಗಳ ಹಾಗೆ ಕಾಣುತ್ತಿತ್ತೆಂದೂ, ತಾವು ತಾ. 21 ಮತ್ತು 22ರಂದು ಡಿಎಸ್ಪಿ ಸಿದ್ದಲಿಂಗಪ್ಪನÀವರಿಗೆ ಕೇಸಿನ ತನಿಖೆಯಲ್ಲಿ ಸಹಾಯ ಮಾಡಿದುದಾಗಿಯೂ ಹೇಳಿ. ತಾ. 21ರಂದು ಕೂಡಾ ತಾವು ಬಡಕಾಯಿಕೊಂಬಿಗೆ ಹೋಗಿರುವುದಾಗಿ ತಿಳಿಸಿದರು. ಆ ನಂಬರ್ ಪ್ಲೇಟ್ ಬಾವಿಯಲ್ಲಿ ಸಿಕ್ಕದುದಲ್ಲವೆಂದು ಆರೋಪಿ ಪರ ವಕೀಲರು ಹೇಳಿದಾಗ ಅದನ್ನು ಸಾಕ್ಷಿ ನಿರಾಕರಿಸಿದರು. 69ನೇ ಸಾಕ್ಷಿ ಲಿಂಗಣ್ಣಯ್ಯ ತಮ್ಮ ಹೇಳಿಕೆಯಲ್ಲಿನಾನು ಸಿಓಡಿಯಲ್ಲಿ ಇನ್ಸ್ಪೆಕ್ಟರ್ ಆಗಿ 1973ರಿಂದ ಕೆಲಸ ಮಾಡುತ್ತಿದ್ದೇನೆ. ಈ ಕೇಸಿನಲ್ಲಿ ಸಿಓಡಿ ಡಿಎಸ್ಪಿಯವರಿಗೆ ಕೇಸಿನ ತನಿಖೆಯಲ್ಲಿ ಸಹಾಯ ಮಾಡಿದೆ. ಅವರ ಅನುಮತಿ ಮೇರೆಗೆ ತಾ. 19-3-77ರಂದು 1ನೇ ಆರೋಪಿಯ ಮಾದರಿ ಕೈ ಬರಹ ತೆಗೆದುಕೊಂಡೆ. ಅದನ್ನು ಡಿಎಸ್ಪಿಯವರಿಗೆ ಒಪ್ಪಿಸಿದೆ. ತಾ. 27-3-77ರಂದು ನಾನು ಮೈಸೂರಿನಲ್ಲಿ ಯು. ಕೃಷ್ಣ ಎಂಬವರ ಮನೆಗೆ ಹೋದೆ. ಅಲ್ಲಿ ಆ ದಿನ ಮಧ್ಯಾಹ್ನ 12.15 ಗಂಟೆ ಸಮಯ 4ನೇ ಆರೋಪಿ ಮಹಾಬಲ ದೇವಾಡಿಗರನ್ನು ದಸ್ತಗಿರಿ ಮಾಡಿದೆ’ ಎಂದು ಹೇಳಿದರು.
ಮೈಸೂರಿನಲ್ಲಿ ಬಂಧಿಸಿದೆ
ಆ ಬಳಿಕ ಮಹಾಬಲ ದೇವಾಡಿಗರನ್ನು ಮೈಸೂರಿನ ಚೀಫ್ ಜುಡೀಶಿಯಲ್ ಮ್ಯಾಜಿಸ್ಟೆçÃಟ್ ಕೋರ್ಟಿನಲ್ಲಿ ಹಾಜರುಮಾಡಿದೆ. ಮ್ಯಾಜಿಸ್ಟೆçÃಟ್ ಅವರು ಮಹಾಬಲ ದೇವಾಡಿಗರನ್ನು 31-3-77ರವರೆಗೆ ಪೊಲೀಸ್ ಕಸ್ಟಡಿಗೆ ಕೊಟ್ಟರು. ಅನಂತರ 4ನೇ ಆರೋಪಿಯನ್ನು ನನ್ನ ರಿಪೋರ್ಟ್ ಮೂಲಕ ಸಿಓಡಿ ಡಿಎಸ್ಪಿಯವರ ಮುಂದೆ ಬೆಂಗಳೂರಿನಲ್ಲಿ ಹಾಜರುಪಡಿಸಿದೆ. ತಾ. 28-3-77ರಂದು ನಾನು ಬೆಂಗಳೂರು ನಾರ್ತ್ ತಹಶೀಲ್ದಾರ್ (ಎಕ್ಸಿಕ್ಯೂಟಿವ್ ಮ್ಯಾಜಿಸ್ಟೆçÃಟ್) ರೊಡನೆ ಫೋನ್ ಮೂಲಕ ಮಾತನಾಡಿದೆ. ಯೂನಿಫಾರ್ಮ್ಗಳನ್ನು ಎಲ್ಲಿಗೆ ತರಬೇಕೆಂದು ಅವರಲ್ಲಿ ವಿಚಾರಿಸಿದೆ. ಅದಕ್ಕೆ ತಹಶೀಲ್ದಾರರು ತಾನು ಆ ದಿನಐಡೆಂಟಿಫಿಕೇಶನ್ ಪರೇಡ್’ ಮಾಡಲು ಸಾಧ್ಯವಾಗುವುದಿಲ್ಲವೆಂದೂ, ಮಾರನೇ ದಿನ ಬೆಳಿಗ್ಗೆ ಖಾಕಿ ಯೂನಿಫಾರ್ಮ್ನ್ನು ತಮ್ಮ ಆಫೀಸಿಗೆ ತಂದುಕೊಟ್ಟರೆ ಸಾಕೆಂದೂ ತಿಳಿಸಿದರು. ಮರುದಿನ ಬೆಳಿಗ್ಗೆ ನಾನು ಖಾಕಿ ಯೂನಿಫಾರ್ಮ್ನ್ನು ಅವರ ಆಫೀಸಿಗೆ ಕೊಂಡುಹೋಗಿ ಕೊಟ್ಟೆ’ ಎಂದು ವಿವರಿಸಿದರು.
ಅಡ್ಡ ವಿಚಾರಣೆಯಲ್ಲಿ ತಹಶೀಲ್ದಾರರು ಬರವಣಿಗೆಯ ಮೂಲಕ ಪೊಲೀಸ್ ಯೂನಿಫಾರ್ಮ್ ಕೊಡಲು ತಿಳಿಸಿಲ್ಲವೆಂದೂ, ತಾವು ಐಡೆಂಟಿಫಿಕೇಶನ್ ಪರೇಡ್’ ಮಾಡುವಂತೆ ರಿಕ್ವಿಜಿಶನ್ ಕೊಟ್ಟಾಗಲೇ ಪೊಲೀಸ್ ಯೂನಿಫಾರ್ಮ್ ತಂದುಕೊಡುವAತೆ ಅವರು ತಮ್ಮಲ್ಲಿ ಹೇಳಿದ್ದರೆಂದೂ ಎಸ್ಪಿ ಆಫೀಸ್ ಪಕ್ಕದ ಕೋಣೆಯಲ್ಲಿ ಪೊಲೀಸ್ ಯೂನಿಫಾರ್ಮ್ ಸಿಗುತ್ತದೆಂದೂ, ಆದರೆ ತಾವು ತಮ್ಮ ಆಫೀಸಿನಲ್ಲಿರುವ ಕಾನ್ಸ್ಟೇಬಲ್ಗಳ ಪೊಲೀಸ್ ಯೂನಿಫಾರ್ಮ್ಗಳನ್ನು ತೆಗೆದುಕೊಂಡು ಹೋಗಿ ಕೊಟ್ಟರೆಂದೂ, ಎಸ್ಪಿಯವರಿಂದ ಪೊಲೀಸ್ ಯೂನಿಫಾರ್ಮ್ ತರುವ ಪ್ರಯತ್ನ ಮಾಡಿಲ್ಲವೆಂದೂ ಹೇಳಿದ ಸಾಕ್ಷಿಯವರು, ತಾವು ಯಾರಿಂದ ಡ್ರೆಸ್ ಪಡಕೊಂಡುದೆAಬುದರ ಬಗ್ಗೆ ಯಾದಿಯನ್ನ ತಯಾರು ಮಾಡಲಿಲ್ಲವೆಂದೂ ತಿಳಿಸಿದರು. ತಹಶೀಲ್ದಾರರು ತಮ್ಮಲ್ಲಿ ಯೂನಿಫಾರ್ಮ್ ಕೊಡಲು ಹೇಳಿದ್ದಕ್ಕೆ ಬರಹ ಮೂಲಕ ಯಾವ ದಾಖಲೆಯೂ ಇಲ್ಲವೆಂದು ಸಾಕ್ಷಿ ಒಪ್ಪಿಕೊಂಡರು. ಮೈಸೂರು ಮ್ಯಾಜಿಸ್ಟೆçÃಟ್ರವರ ಮುಂದೆ 4ನೇ ಆರೋಪಿ ಮಹಾಬಲ ದೇವಾಡಿಗರನ್ನು ಹಾಜರುಮಾಡಿದಾಗ ಕೊಟ್ಟ ರಿಮಾಡ್ ರಿಪೋರ್ಟ್ನಲ್ಲಿ ಎಷ್ಟು ಹೊತ್ತಿಗೆ ಯಾವ ತಾರೀಕಿಗೆ ದಸ್ತಗಿರಿ ಮಾಡಿದ್ದು ಎಂಬುದನ್ನು ನಮೂದಿಸಿಲ್ಲವೆಂದೂ ಸಾಕ್ಷಿ ಒಪ್ಪಿಕೊಂಡರು. ಆದರೆ ಸದ್ರಿ ರಿಮಾಂಡ್ ಅರ್ಜಿಯಲ್ಲಿ ದಸ್ತಗಿರಿ ಮಾಡಿದ ತಾರೀಕನ್ನು ಮೇಲೆ ಒಂದು ಬದಿಯಲ್ಲಿ27-3-77- ಮೈಸೂರು’ ಎಂದು ಬರೆದಿರುವುದಾಗಿ ಸರಕಾರಿ ವಕೀಲರು ಕೇಳಿದ ಪ್ರಶ್ನೆಗೆ ಸಾಕ್ಷಿ ಉತ್ತರಿಸಿದರು.
ಚಿತ್ರಹಿಂಸೆ ಕೊಟ್ಟಿಲ್ಲ
ಮಹಾಬಲ ದೇವಾಡಿಗರನ್ನು ತಾ. 9-1-77ರಲ್ಲಿ ಶಿಮೊಗ್ಗದಲ್ಲಿ ದಸ್ತಗಿರಿ ಮಾಡಲಾಯಿತೆಂದೂ ಮತ್ತೆ ಅವರನ್ನು ಬೇರೆ ಬೇರೆ ಕಡೆಗಳಿಗೆ ಕೊಂಡುಹೋಗಿ ನಾನಾ ರೀತಿಯಲ್ಲಿ ಚಿತ್ರಹಿಂಸೆ ಕೊಡಲಾಯಿತೆಂದೂ ಆರೋಪಿ ಪರ ವಕೀಲರು ಹೇಳಿದುದನ್ನು ಸಾಕ್ಷಿ ನಿರಾಕರಿಸಿದರು.
ಮುಂದುವರಿಯುವುದು….




































