ಮೂರನೇ ವರ್ಷಕ್ಕೆ ಕಾಲಿಟ್ಟ “ಆರ್.ಬಿ.ನ್ಯೂಸ್”

Picture of RB NEWS

RB NEWS

Bureau Report

“ಆರ್.ಬಿ. ನ್ಯೂಸ್” ಸಾಮಾಜಿಕ ಮಾಧ್ಯಮವು ಆರಂಭವಾಗಿ ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಈ ಮೂರು ವರ್ಷಗಳಲ್ಲಿ ಈ ಸುದ್ದಿ ವಾಹಿನಿಯು ಜನರ ಸಮಸ್ಯೆಗಳಿಗೆ ಕಿವಿಯಾಗಿದೆ. ಮೂಲಸೌಕರ್ಯ ಸಮಸ್ಯೆಗಳನ್ನು ಬೊಟ್ಟು ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿದೆ. ಇಲಾಖೆಗಳು ಸುದ್ದಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಿವೆ.

ಕಳೆದ 32 ವರ್ಷಗಳಿಂದ ಪತ್ರಿಕಾಕ್ಷೇತ್ರದಲ್ಲಿ ದುಡಿಯುತ್ತಾ ಬಂದ ನಾನು ಆಕಸ್ಮಿಕವಾಗಿ ಸಾಮಾಜಿಕ ಮಾಧ್ಯಮ ರಂಗವನ್ನು ಆಯ್ದುಕೊಂಡೆನಾದರೂ, ಜನರು ನೀಡಿದ ಪ್ರೋತ್ಸಾಹ ಧನ್ಯತೆಯನ್ನು ತಂದಿದೆ.

ಜನಸಾಮಾನ್ಯರ ಸಮಸ್ಯೆಗಳು, ಸಾಮಾಜಿಕ ಚಿಂತನೆಗಳು, ಅಪರಾಧ ಜಗತ್ತಿನ ಕೆಲವು ಸುದ್ದಿಗಳು ಪ್ರಥಮವಾಗಿ ಬಹಿರಂಗವಾಗುತ್ತಿದ್ದುದು “ಆರ್.ಬಿ. ನ್ಯೂಸ್” ಮೂಲಕವೇ. ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಕಳೆದ 21 ವರ್ಷಗಳಿಂದ ನೆಲೆಕಂಡುಕೊoಡಿದ್ದ ನಕ್ಸಲ್ ಚಟುವಟಿಕೆಯು ಈ ಭಾಗದಿಂದ ದೂರವಾಯಿತು ಎಂದು ನಂಬಿದ್ದ ಹೊತ್ತಿನಲ್ಲಿ “ಈದುವಿನಲ್ಲಿ ಮತ್ತೇ ನಕ್ಸಲರ ಹೆಜ್ಜೆ ಗುರುತುಗಳು” ವರದಿಯನ್ನು ಮೊದಲು ಪ್ರಕಟಿಸಿದ್ದು “ಆರ್.ಬಿ ನ್ಯೂಸ್”.

ನಕ್ಸಲ್ ಚಟುವಟಕೆಯಿಲ್ಲ ಎನ್ನುತ್ತಾ ಆರಾಮವಾಗಿದ್ದವರು ದಿಗಿಲುಕೊಂಡು ವರದಿಯನ್ನೇ ಸುಳ್ಳೆಂದು ಪ್ರತಿಪಾದಿಸುತ್ತಾ ಬಂದಿದ್ದರು. ಆದರೆ ವಿಕ್ರಮ್ ಗೌಡ ಹತ್ಯೆ ಪ್ರಕರಣದ ನಂತರದಲ್ಲಿ ನಕ್ಸಲರ ಶರಣಾಗತಿಯಾಗಿ, ಮುಖ್ಯ ವಾಹಿನಿಯಲ್ಲಿ ಸೇರಿ ಹೋಗಿರುವುದು ಉತ್ತಮ ಬೆಳವಣಿಗೆ.

ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಭರಿಸಲಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲಾಗುತ್ತಿದ್ದ ಪರಿಣಾಮ, ಸಾಮಾಜಿಕ ವ್ಯವಸ್ಥೆಗೆ ಪೂರಕವಾದ ಸುದ್ದಿಗಳನ್ನು “ಆರ್.ಬಿ.ನ್ಯೂಸ್” ಮಾಡಿದೆ. ನೈಜ ವಿಷಯವನ್ನು ಬಿತ್ತರಿಸಿದೆ. ಬೆದರಿಕೆಗಳು ಬಂದಾಗ ಬೆದರದೆ ತಾಜಾತನವನ್ನು ಪರಿಚಯಿಸಿದೆ.


ರಾಷ್ಟ್ರೀಯ ಭಾವೈಕ್ಯತೆಯ ನಾಡಿಮಿಡಿತವಾಗಿರುವ “ಆರ್.ಬಿ.ನ್ಯೂಸ್” ಸಾಗಿಬಂದ ಹಾದಿಯನ್ನು ಇಲ್ಲಿ ಉಲ್ಲೇಖಿಸಲೇ ಬೇಕು. “ಆರ್.ಬಿ.ನ್ಯೂಸ್” ಸಾಮಾಜಿಕ ಮಾಧ್ಯಮ ಆರಂಭಿಸಬೇಕೆoಬ ಕನಸ್ಸು ಕಂಡು 2003 ಫೆಬ್ರವರಿ 17ರಂದು ಕಾರ್ಕಳದ ಕಡೆಗೆ ಮೂಡುಬಿದಿರೆ ಮಾರ್ಗವಾಗಿ ಬರುತ್ತಿದೆ. ಸಾಣೂರು ದಾಟಿತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿವ್ಯ ದರ್ಶನವಾಗಿತ್ತು. ಜೈನ ಧರ್ಮದ ಪರಮಪೂಜ್ಯ ಮುನಿಶ್ರೀ 108 ಅರ್ಪಣ್ ಸಾಗರ ಮುನಿಮಹಾರಾಜರು ಅವರು ಕಾರ್ಕಳ ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ದರುಶನ ಪಡೆಯಲು ಮೂಡಬಿದಿರೆ ಮಾರ್ಗವಾಗಿ ಕಾರ್ಕಳಕ್ಕೆ ಪಾದಸ್ಪರ್ಶ ಮಾಡುತ್ತಿದ್ದರು. ಆ ಕ್ಷಣದಲ್ಲಿ ಅವರ ದಿವ್ಯ ಆಶೀರ್ವಾದ ನನ್ನ ಪಾಲಿಗೆ ದೊರೆತ ಸುಯೋಗವಾಗಿತ್ತು.

ಈ ಸಾಮಾಜಿಕ ಜಾಲತಾಣದ ಬೆಳವಣಿಗೆಯಲ್ಲಿ ಸಹಕಾರ ನೀಡುತ್ತಿರುವ ಹಿರಿಯ ಪತ್ರಕರ್ತರಾದ ಮೋಹನ್ ಬೋಳಂಗಡಿ, ಶ್ರೀರಾಮ ದಿವಾಣ, ರಾಧಾಕೃಷ್ಣ ತೊಡಿಕಾನ, ವಿ.ಕೆ.ವಾಲ್ಪಾಡಿ, ಜನಾರ್ದನ ಕೊಡವೂರು,ರಾಯಿ ರಾಜ್‌ಕುಮಾರ್, ಚಿನ್ನ ಕಲ್ಲಡ್ಕ, ಮೋಹನ್ ಗಟ್ಟಿ, ವಿನಯಕೃಷ್ಣ ಭಟ್, ಸುಬ್ರಹ್ಮಣ್ಯ ಆಚಾರ್ಯ, ಡಾ.ಮಾಲತಿ ಪೈ, ಜಾಲತಾಣದ ವಿನ್ಯಾಸ ಮಾಡಿದ G Space Hosting ನ ಸತ್ಯಪ್ರಕಾಶ್ ಬೆಂಗಳೂರು ಹಾಗೂ ಜಾಹಿರಾತುದಾರರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ತನ್ನ ಮಾಧ್ಯಮದ ಬೆಳವಣಿಗೆಗೆ ಮುಂದೆಯೂ ತಮ್ಮೆಲ್ಲರ ಸಹಕಾರ ಬಯಸುತ್ತೇನೆ.

ಆರ್.ಬಿ.ಜಗದೀಶ್

ವ್ಯವಸ್ಥಾಪಕ ಸಂಪಾದಕ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top