ಸಚಿತ್ರ ವರದಿ : ರಾಯಿ ರಾಜಕುಮಾರ ಮೂಡುಬಿದಿರೆ





ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಕಚೇರಿ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ತಹಶೀಲ್ದಾರ್ ಶ್ರವಣ ಕುಮಾರ ಧ್ವಜಾರೋಹಣವನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್, ಗೃಹರಕ್ಷಕ ದಳ, ಎನ್ ಸಿ ಸಿ, ಸ್ಕೌಟ್ಸ್, ಗೈಡ್ಸ್, ಇತ್ಯಾದಿಗಳಿಂದ ಗೌರವ ರಕ್ಷೆ , ಪಥ ಸಂಚಲನ ನಡೆಯಿತು. ವಿದ್ಯಾರ್ಥಿಗಳು ಒಂದೇ ಮಾತರಂ,ನಾಡಗೀತೆ , ರೈತಗೀತೆ, ಹಾಡಿದರು.
ಮೂಡುಬಿದಿರೆ ತಾಲೂಕು ಮಟ್ಟದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂಡು ಮಾರುನಾಡು ಅನುಕ್ಷಿತ, ಧರೆಗುಡ್ಡೆ ದಿತೇಶ್ ಶೆಟ್ಟಿ, ನೆಲ್ಲಿಕಾರು ರೋಷನ್ ಇವರುಗಳಿಗೆ ಲ್ಯಾಪ್ಟಾಪ್ ಅನ್ನು ನೀಡುವ ಮೂಲಕ ಸ್ಥಳೀಯ ಶಾಸಕರು ಅಭಿನಂದಿಸಿದರು. ಅದೇ ರೀತಿ ತಾಲೂಕಿನ ಎಲ್ಲಾ ವಿದ್ಯಾ ಸಂಸ್ಥೆಗಳ ಅತಿ ಹೆಚ್ಚು ಅಂಕಗಳನ್ನು ಪಡೆದ ಎಲ್ಲರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸ್ಥಳೀಯ ಶಾಸಕ ಉಮಾನಥ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮೂಡದ ಅಧ್ಯಕ್ಷ ರಕ್ಷಾ ವರ್ಧನ ಪಡಿವಾಳ, ಎಸಿಪಿ ಡಿ ಶ್ರೀಧರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ, ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್, ಬಿ ಇ ಓ ವಿರೂಪಾಕ್ಷಪ್ಪ, ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ಇಂದು ಸ್ವಾಗತಿಸಿದರು. ಸಹಾಯಕ ತಾಸಿಲ್ದಾರ್ ರಾಮ ಕೆ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಲ್ಲಿಸಿದರು.

ದೇಶದ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಮೂಡುಬಿದಿರೆ ಪುರಸಭೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಧ್ವಜಾರೋಹಣ ನೆರವೇರಿಸಿದರು.

ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮೂಡಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ. ಇದೇ ಸಂದರ್ಭದಲ್ಲಿ ರಾಯಿ ರಾಜಕುಮಾರ ಮೂಡುಬಿದಿರೆ, ಪ್ರೇಮಶ್ರೀ ಉಪಸ್ಥಿತರಿದ್ದರು.
ರಾಣಿ ಅಬ್ಬಕ್ಕ ಕಿರು ಉದ್ಯಾವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಜವನೆರ್ ಬೆದ್ರ ಫೌಂಡೇಶನ್ (ರಿ) ವತಿಯಿಂದ ಅರಮನೆ ಬಾಗಿಲಿನ ಜವನೆರ್ ಬೆದ್ರ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಂಜಾನೆ ನಡೆಯಿತು.
ಚೌಟ ಮನೆತನದ ಕುಲದೀಪ್ ಎಂ , ಮಾಜಿ ಯೋಧ ಸುಬೇದಾರ್ ಮೇಜರ್ ರಾಜೇಂದ್ರ ಜಿ ,ರಾಣಿ ಅಬ್ಬಕ್ಕನ ಪುತ್ತಲಿಗೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ನೆರವೇರಿಸಿದರು.
ಸಂಘಟನೆಯ ಅಧ್ಯಕ್ಷ ಅಮರಕೋಟೆ , ಕಾರ್ಯದರ್ಶಿ ದಿನೇಶ್ ನಾಯಕ್, ಸಂಚಾಲಕ ನಾರಾಯಣ ಪಡುಮಲೆ , ಪ್ರಮುಖರಾದ ರಂಜಿತ್ ಶೆಟ್ಟಿ ,ಮನು ಒಂಟಿ ಕಟ್ಟೆ, ಸಂದೀಪ್ ದರೆಗುಡ್ಡೆ, ಸಂಪತ್ ಪೂಜಾರಿ, ಗಣೇಶ್ ಪೈ, ಸುರೇಶ್ ಕಾಯರಗುಂಡಿ , ಗೀತಾ ಆಚಾರ್ಯ, ಚಂದ್ರಶೇಖರ್ ಕೋಟ್ಯಾನ್, ಪ್ರತಿಶ್ ಸಮಗಾರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ನಡೆಯುವ ಕೃಷ್ಣೋತ್ಸವ 2024 ರ ಆಮಂತ್ರಣವನ್ನು ಚೌಟ ಮನೆತನದ ಕುಲದೀಪ್ ಎಂ ಅವರಿಗೆ ನೀಡಲಾಯಿತು.

ಸಮಾಜ ಮಂದಿರದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ದಲ್ಲಿ ಧ್ವಜಾರೋಹಣ ನೆರವೇರಿಸಿ ಮಾಜಿ ಸಚಿವ, ಸಮಾಜ ಮಂದಿರ ಸಭಾ ದ ಅಧ್ಯಕ್ಷ ಅಭಯಚಂದ್ರ ಜೈನ್ ಮಾತನಾಡಿದರು. ಸುರೇಶ್ ಪ್ರಭು ಸ್ವಾಗತಿಸಿದರು.

ಗಂಟಾಲ್ಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ಥಳೀಯ ಹಿರಿಯ ಕೆ. ಶ್ರೀಪತಿ ಭಟ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಜರುಗಿದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾಜಿ ಮಂತ್ರಿ ಅಭಯ ಚಂದ್ರ ಜೈನ್ ಅವರು ಮಾತನಾಡಿದರು.














