ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಉದ್ಘಾಟನೆ



ಮೂಡುಬಿದಿರೆ ಸಮಾಜ ಮಂದಿರ ಸಭಾದಲ್ಲಿ ನಡೆಯುವ ಈ ಬಾರಿಯ 62 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಇಂದು ಬೆಳಿಗ್ಗೆ ವಿದ್ಯುಕ್ತವಾಗಿ ಆರಂಭಗೊಂಡಿತು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ದೀಪ ಹಚ್ಚಿ ಬೆಳಗಿಸುವುದರ ಮೂಲಕ ಗಣೇಶೋತ್ಸವ ಕಾರ್ಯಕ್ರಮವನ್ನು ಉಧ್ಘಾಟಿಸಿದರು.
ಉಭಯ ಜಿಲ್ಲೆಗಳಲ್ಲಿ ಒಟ್ಟು ಸುಮಾರು ಸಾವಿರಕ್ಕೆ ಹತ್ತಿರದ ಸಂಖೆಯಲ್ಲಿ ಇಂಥ ಸಾರ್ವಜನಿಕ ಗಣೇಶ ಪೂಜೆ ಹಾಗೂ ಉತ್ಸವ ನಡೆಯುತ್ತಿದೆ . ಇದರಿಂದಾಗಿ ಜನರಲ್ಲಿ ಭಯ ಭಕ್ತಿಯಷ್ಟೇ ಅಲ್ಲ ಒಗ್ಗಟ್ಟಿನ ಜೀವನಕ್ಕೆ ಪ್ರೇರಣೆ ದೊರೆಯುತ್ತದೆ. ನಮ್ಮೆಲ್ಲರ ದುರಿತಗಳನ್ನು ನಿವಾರಿಸಿವುದಕ್ಕಾಗಿ ವಿಘ್ನೇಶ್ವರನನ್ನು ಪೂಜಿಸುತ್ತೇವೆ. ಸಿದ್ಧಿವಿನಾಯಕ ಎಂದು ಕರೆಯಲ್ಪಡುವ ಆತನು ನಮ್ಮ ಅಪೇಕ್ಷೆಗಳನ್ನು ನೆರವೇರಿಸಿಕೊಡುತ್ತಾನೆ ಎಂಬುದಾಗಿ ಡಾ.ಎಂ. ಮೋಹನ ಆಳ್ವ ಅವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್,ಮಾಜಿ ಸಚಿವ ಹಾಗೂ ಮೂಡುಬಿದಿರೆ ಸಮಾಜ ಮಂದಿರ ಸಭಾ ಅಧ್ಯಕ್ಷ ಕೆ. ಅಭಯಚಂದ್ರ ಜೈನ್,ಮೂಡುಬಿದಿರೆ ಅರಮನೆಯ ಎಂ. ಕುಲದೀಪ್,ಉದ್ಯಮಿ ಕೆ. ಶ್ರೀಪತಿ ಭಟ್, ಮೂಡುಬದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪಿ. ಎಂ. ಸಮತಿಯ ಪ್ರಧಾನ ಕಾರ್ಯದರ್ಶಿ ಎಂ. ಸುದರ್ಶನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂ. ಸುದರ್ಶನ್ ಅತಿಥಿಗಳನ್ನು,ಭಕ್ತಾದಿಗಳನ್ನು ಸ್ವಾಗತಿಸಿದರು. ವಕೀಲ ಚೇತನ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು .ರಾಜಾರಾಂ ನಾಗರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಪಿ. ಎಂ. ಅವರು ಅತಿಥಿಗಳಿಗೆ ಶಾಲು ಹೊದಿಸಿ ಸಮ್ಮಾನಿಸಿ ,ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
-ವಿ. ಕೆ. ವಾಲ್ಪಾಡಿ





































