ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆ
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಫೋಟೋ : ಮಾನಸ ಫೋಟೋಗ್ರಾಫಿ





ಮೂಡುಬಿದರೆ ಸಮಾಜ ಮಂದಿರದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಕಾರ್ಯ ದ.ಕ. ಜಿಲ್ಲಾ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ಗೌರವ ಉಪಸ್ಥಿತಿಯಲ್ಲಿ ಅಲಂಕಾರ ಈಶ್ವರ ಭಟ್ ಅರ್ಚಕತ್ವ ದಲ್ಲಿ ಸೆಪ್ಟಂಬರ್ 7ರಂದು ನಡೆಯಿತು. ಅದಕ್ಕೆ ಪೂರ್ವಭಾವಿಯಾಗಿ ಗಣ ಹೋಮ ಹಾಗೂ ಗೌರಿ ಕೆರೆ ಶ್ರೀರಾಮ ಭಜನಾ ಮಂಡಳಿ ಅವರಿಂದ ಭಜನಾ ಸಂಕೀರ್ತನೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು-ಎರಡನೇ ವರ್ಷ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರುವುದು ನನ್ನ ಪುಣ್ಯ ಎಂದು ಸ್ಮರಿಸಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷ ಶ್ರೀಪತಿ ಭಟ್ ಮಾತನಾಡಿ ಎಲ್ಲರೂ ಏಕ ಮನಸ್ಸಿನಿಂದ ಸಂಘಟಿತರಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ 6 1 ವರ್ಷದಿಂದ ಕಾರ್ಯಕ್ರಮ ಬಹಳ ಉತ್ತಮವಾಗಿ ಮುಂದುವರೆಯುತ್ತಿದೆ. ಈ ವರ್ಷ ಗಣೇಶ ಮೂರ್ತಿ ಟ್ಯಾಬ್ಲೊಗಳ ಎದುರು ತೆರಳುವುದರಿಂದ ರಾತ್ರಿ 12 ಗಂಟೆಗೆ ಮೊದಲೇ ತೆಪ್ಪೋತ್ಸವವನ್ನು 5ನೇ ದಿನದಂದು ನಡೆಸಿಕೊಡಲು ಸಹಕರಿಸುತ್ತೇವೆಂದು ಎಲ್ಲಾ ಟ್ಯಾಬ್ಲೆಗಳ ಮಾಲಕರು ತಿಳಿಸಿರುವುದಕ್ಕೆ ಅವರನ್ನು ಅಭಿನಂದಿಸಿದರು.
ತರುವಾಯ ಈಶ್ವರ ಭಟ್ ಅವರ ಹಿರಿತನದಲ್ಲಿ ಸುಬ್ರಮಣ್ಯ ಭಟ್ ಅವರ ವಿದ್ಯುಕ್ತವಾಗಿ ಪ್ರತಿಷ್ಠಾಪನ ಕಾರ್ಯವನ್ನು ನೆರವೇರಿಸಿದರು. ವೇದಿಕೆಯಲ್ಲಿ ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಮಂತ್ರಿ ಅಭಯ ಚಂದ್ರ ಜೈನ್, ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್, ಜಯಶ್ರೀ ಅಮರನಾಥ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ, ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿಎಂ, ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ, ಹಾಗೂ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಕಿಶೋರ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಚೇತನ್ ಕುಮಾರ್ ಶೆಟ್ಟಿ ವಂದಿಸಿದರು.































