ಮೂಡುಬಿದಿರೆ : ವಿಪರೀತ ಗಾಳಿ ಮಳೆಗೆ ಹಲವಾರು ಮರಗಳು ಬುಡಮೇಲು, ಲಕ್ಷಾಂತರ ನಷ್ಟ



ಮೂಡಬಿದಿರೆ :ಅಲಂಗಾರು ಪರಿಸರದಲ್ಲಿ ರಸ್ತೆ ಬದಿಯ ಹಲವಾರು ಮರಗಳು ಬುಡ ಸಮೇತ ಮುರಿದುಬಿದ್ದ ಕಾರಣ ಕೆಲವಾರು ವಾಹನಗಳು ಜಖಂ ಗೊಂಡಿವೆ.
ಅಲಂಗಾರು ಬಸ್ ನಿಲ್ದಾಣದ ಸಮೀಪದ ವಿಶಾಲವಾದ ಮರ ಬುಡಮೇಲಾಗಿ ರಿಕ್ಷಾಗಳು ನಿಲ್ಲುವ ತಂಗುಧಾಣದ ಮೇಲೆ ಬಿದ್ದಿತ್ತು.
ಅಲಂಗಾರು ಚರ್ಚಿನ ಎದುರು ಕೂಡ ಒಂದು ಮರ ಬುಡ ಮೇಲಾಗಿ ವಾಹನದ ಮೇಲೆ ಬಿದ್ದಿದ್ದು ವಿದ್ಯುತ್ ತಂತಿ ಗಳು ತುಂಡಾಗಿರುತ್ತದೆ.
ಮಾಸ್ತಿ ಕಟ್ಟೆಗೆ ಹೋಗುವ ರಸ್ತೆಯ ಮೇಲೆ ಕೂಡ ಅಡ್ಡಲಾಗಿ ಮರ ಬಿದ್ದ ಪರಿಣಾಮ ಬಹಳಷ್ಟು ಸಮಯ ವಾಹನಗಳ ಓಡಾಟಕ್ಕೆ ತೊಂದರೆಯಾಗಿರುತ್ತದೆ. ಎಲ್ಲ ಕಡೆಗಳಲ್ಲಿ ಬಿದ್ದ ಮರವನ್ನು ನಿವಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸ್, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯರು ಅಹರ್ನಿಶಿ ದುಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

ಫೋಟೋ ಕ್ಯಾಷ್ಯನ್: ಯಶ್ವಿ ಪ್ಯಾರಡೈಸ್ ಎದುರು ನಿಲ್ಲಿಸಿದ ಟ್ರ್ಯಾಕ್ಟರ್ ಮೇಲೆ ಬಿದ್ದ ಮರ
ವರದಿ : ರಾಯಿ ರಾಜಕುಮಾರ್ ಮೂಡುಬಿದಿರೆ

































