ಮೂಡುಬಿದಿರೆ : ವಾಹನ ಸಂಚಾರ ತಾತ್ಕಾಲಿಕ ಬದಲಾವಣಿ
ಮೂಡುಬಿದಿರೆ : ಆಗಸ್ಟ್ 14 ರ ಸಂಜೆ 6.00 ಗಂಟೆಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಮೂಡುಬಿದಿರೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ ನಡೆಯಲಿರುವುರಿಂದ ವಾಹನ ಸಂಚಾರ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ ಎಂದು ಮೂಡಬಿದಿರೆ ಮೂಡುಬಿದಿರೆ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾವಿರ ಕಂಬ ಬಸದಿಯಿಂದ -ಹಳೆಯ ಪೊಲೀಸ್ ಠಾಣೆ- ಹನುಮಾನ್ ದೇವಸ್ಥಾನ- ಕೃಷ್ಣಕಟ್ಟೆ- ಬಸ್ ನಿಲ್ದಾಣ ಪ್ರವೇಶದಿಂದಾಗಿ ಸಮಾಜ ಮಂದಿರಕ್ಕೆ ಬೃಹತ್ ಪಂಜಿನ ಮೆರವಣಿಗೆಯು ನಡೆಯಲಿದೆ.

ಈ ದಿನ ಸಂಜೆ 6.00 ಗಂಟೆಯ ನಂತರ ಮೂಡಬಿದರೆ ಪೇಟೆಯಲ್ಲಿನ ಸಂಚಾರದ ಬಗ್ಗೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ.
ಸಾರ್ವಜನಿಕರು ಮಂಗಳೂರಿನಿಂದ ಕಾರ್ಕಳ ಕಡೆಗೆ ತೆರಳುವವರು ರಿಂಗ್ ರೋಡ್ -ಅಲಂಗಾರ್ ಜಂಕ್ಷನ್ ನಿಂದಾಗಿ ತೆರಳುವುದು, ಕಾರ್ಕಳದಿಂದ ಮಂಗಳೂರು ಕಡೆಗೆ ತೆರಳುವ ಅಲಂಗಾರ್ ನಿಂದ ರಿಂಗ್ ರೋಡ್ ಇನ್ನರ್ ವೀಲ್ ಸರ್ಕಲ್ನಿಂದಾಗಿ ತೆರಳುವುದು, ಮಂಗಳೂರಿನಿಂದ ಬೆಳ್ತಂಗಡಿ ಬಿಸಿ ರೋಡ್ ಕಡೆಗೆ ತೆರಳುವವರು ನಿಶ್ಚಿತಾ ಸರ್ಕಲ್ ನಿಂದಾಗಿ ಅಮರಶ್ರೀ ಟಾಕೀಸ್ ನಿಂದ ಸತ್ಯನಾರಾಯಣ ದೇವಸ್ಥಾನನಿಂದಾಗಿ ತೆರಳುವುದು. ಸಾರ್ವಜನಿಕರು ಮೂಡಬಿದರೆಯ ನಗರಕ್ಕೆ ಬಾರದೇ ಮೂಡಬಿದರೆಯ ಹೊರ ವರ್ತುಳ (ಬೈಪಾಸ್) ರಸ್ತೆಯಲ್ಲಿ ಮೆರವಣಿಗೆಯು ಮುಗಿಯುವ ವರೆಗೂ ಸಂಚರಿಸಿ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವುದಾಗಿದೆ.






































