ಮೂಡುಬಿದಿರೆ: ವಾಹನ ಸಂಚಾರ ತಾತ್ಕಾಲಿಕ ಬದಲಾವಣೆ
ಮೂಡುಬಿದಿರೆ : ಆ. 27 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಮೂಡಬಿದರೆ ಇದರ 108ನೇ ವರ್ಷದ ಮೊಸರು ಕುಡಿಕೆ ಶೋಭಾಯಾತ್ರೆ ಉತ್ಸವವು ಮೂಡಬಿದರೆ ನಗರದ ರಾಜ ಬೀದಿಯಲ್ಲಿ ಸಂಚರಿಸಲಿದೆ.
ಈ ಬಗ್ಗೆ ಮೂಡಬಿದರೆ ಪೇಟೆಯಲ್ಲಿನ ವಾಹನ ಸಂಚಾರದ ಬಗ್ಗೆ ಕೆಲವೊಂದು ಬದಲಾವಣೆ ತಾತ್ಕಾಲಿಕವಾಗಿ ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ವಾಹನವನ್ನು ಮಧ್ಯಾಹ್ನ 01.00 ಗಂಟೆಯ ನಂತರ ಮೂಡಬಿದರೆ ನಗರಕ್ಕೆ ಬಾರದೇ ಮೂಡುಬಿದರೆ ಹೊರ ವರ್ತುಲಾ [ಬೈಪಾಸ್ ರಸ್ತೆಯಲ್ಲಿ] ಮೆರವಣಿಗೆ ಮುಗಿಯುವ ತನಕ ಸಂಚರಿಸಬೇಕಾಗಿ

ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




































