ಮೂಡುಬಿದಿರೆ ಲಾವಂತ ಬೆಟ್ಟಿನ ಕೊಳಕು ತಾಣಕ್ಕೆ ದಾಳಿ ನಡೆಸಿದ ಮೂಡುಬಿದಿರೆ ಪುರಸಭಾ ಅಧಿಕಾರಿಗಳು
ಮೂಡುಬಿದಿರೆ: ಸ್ಥಳೀಯ ಪುರಸಭಾ ವ್ಯಾಪ್ತಿಗೆ ಒಳಪಡುವ ಲಾವಂತಬೆಟ್ಟು ಅಲ್ಲಿರುವ ಮೂಡುಬಿದಿರೆ ಮುಖ್ಯ ಚರ್ಚಿನ ಹಿಂಬದಿಯಲ್ಲಿರುವ ರಾಜನ್ ಸ್ವೀಟ್ಸ್ ನ ಕಾರ್ಮಿಕರಿಗೆ ಸಂಬಂಧಿಸಿದ ಎನ್ನಲಾದ ನಾಲ್ಕಾರು ಷಡ್ ಗಳ ಮೇಲೆ ಪುರಸಭಾ ಸ್ವಚ್ಛತಾ ಸಹಾಯರೊಂದಿಗೆ ಆರೋಗ್ಯ ಅಧಿಕಾರಿ ಶಶಿರೇಖಾ ದಾಳಿ ನಡೆಸಿದ್ದಾರೆ.



ದಾಳಿ ಮಾಡಿದ ಸಂದರ್ಭದಲ್ಲಿ ಕಂಡುಬಂದಂತೆ ಶೆಡ್ಡುಗಳ ಅಡಿಯಲ್ಲಿ ಮನುಷ್ಯರ ಎಲ್ಲ ರೀತಿಯ ತ್ಯಾಜ್ಯಗಳೊಂದಿಗೆ ಪ್ಲಾಸ್ಟಿಕ್ ನೀರು ಇತ್ಯಾದಿಗಳೆಲ್ಲವೂ ಒಟ್ಟು ಸೇರಿದ್ದು, ಸುಮಾರು ಎರಡು ಲೋಡ್ ಗಳಷ್ಟು ಅಂತಹ ಕೊಳಕು ತ್ಯಾಜ್ಯವನ್ನು ಕಂಡುಬಂದಿದ್ದು, ಬಹಳ ತ್ರಾಸದಾಯಕವಾಗಿ ಪುರಸಭಾ ಸ್ವಚ್ಛತಾ ಸಹಾಯಕ ಒಡಗೂಡಿ ನಿವಾರಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು ಎಂದು ತಿಳಿದುಬಂದಿದೆ.
ಸ್ಥಳೀಯ ವ್ಯಕ್ತಿಗಳು ಎಷ್ಟು ಬಾರಿ ತಿಳಿಹೇಳಿದರು ಕೇಳದ ಕಾರಣದಿಂದಾಗಿ ಈ ಕಾರ್ಯಾಚರಣೆಯನ್ನು ಮಾಡಬೇಕಾಯಿತು ಎಂದು ಪುರಸಭಾ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.
ನಾಲ್ಕಾರು ಶೆಡ್ಡುಗಳಲ್ಲಿ ಕೇವಲ ಎರಡಕ್ಕೆ ಮಾತ್ರ ಪುರಸಭಾ ಡೋರ್ ನಂಬರ್ ಲಭ್ಯ ಇರುತ್ತದೆ. ಉಳಿದೆಲ್ಲವೂ ಅನಧಿಕೃತ ಎಂದು ತಿಳಿದುಬಂದಿದೆ.














