

ಮೂಡುಬಿದಿರೆ ರಾಯಿ ರಾಜಕುಮಾರ ಅವರಿಗೆ ಶಿಕ್ಷಣ ಸೇವಾ ರತ್ನ, ಗುರುಭೂಷಣ ಪ್ರಶಸ್ತಿ

ಬೆಂಗಳೂರು : ಬೆಂಗಳೂರಿನ ಸೂರ್ಯ ಫೌಂಡೇಶನ್ ಅವರು ನೀಡುವ ಶಿಕ್ಷಣ ಸೇವಾ ರತ್ನ ಪುರಸ್ಕಾರಕ್ಕೆ ದ. ಕ. ಜಿಲ್ಲಾ ಸಂಯೋಜಕ, ದ ಕ ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ಪತ್ರಕರ್ತ ಮೂಡುಬಿದಿರೆ ರಾಯಿ ರಾಜಕುಮಾರ ಇವರಿಗೆ ಬೆಂಗಳೂರಿನ ಇಂಡೋಗ್ಲೋಗ್ ಪಿ ಯು ಕಾಲೇಜಿನಲ್ಲಿ ಅಕ್ಟೋಬರ್ 15ರಂದು ನೀಡಲ್ಪಡಲಿದೆ.

ಅದೇ ರೀತಿ ಬೆಂಗಳೂರಿನ ಸ್ಪಾರ್ಕ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು (ರಿ), ಮೈಸೂರು ಇವರಿಂದ ಅಕ್ಟೋಬರ್ 16ರಂದು ನೀಡಲ್ಪಡುವ ಗುರುಭೂಷಣ ಪ್ರಶಸ್ತಿಗೆ ಮೂಡುಬಿದಿರೆಯ ರಾಯಿ ರಾಜಕುಮಾರ ಆಯ್ಕೆಯಾಗಿರುತ್ತಾರೆ.





































