ಮೂಡುಬಿದಿರೆ ಯಕ್ಷಸಂಗಮ-ರಜತ ಸಂಭ್ರಮ ಉದ್ಘಾಟನೆ
ಮೂಡುಬಿದಿರೆ: ಸ್ಥಳೀಯ ಯಕ್ಷಸಂಗಮ ದವರ 25ನೇ ವರ್ಷದ ರಜತ ಸಂಭ್ರಮ ಆಗಸ್ಟ್ 10 ರಂದು ದೀಪ ಬೆಳಗಿ ಭಾರತ ಭೂಷಣ ಡಾ. ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿಯವರು ಉದ್ಘಾಟಿಸಿದರು.

ಒರಿಸ್ಸಾ ಟಾಟಾ ರಿಫ್ರಾಕ್ಟರೀಸ್ ಲಿಮಿಟೆಡ್ ನ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಸಿ ದೇವದಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಹರಿನ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮೈನಾಡ್ಕ, ಸ್ಕೈ ಪೇಂಟ್ಸ್ ಮಾಲಕ ಶೈಲೇಂದ್ರ ಕುಮಾರ್ ಜೈನ್, ಪೃಥ್ವಿ ಡೆವಲಪರ್ಸ್ ನ ರೇಮನಾಥ ಮಾರ್ಲಾ, ಉದ್ಯಮಿ ಧನಲಕ್ಷ್ಮಿ ಶ್ರೀಪತಿ ಭಟ್, ಉದ್ಯಮಿ ಪುನೀತ್ ಕಟ್ಟೆ ಮಾರ್, ಮೂಡುಬಿದ್ರೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಅಧ್ಯಕ್ಷ ದಿವಾಕರ ಶೆಟ್ಟಿ, ಯಕ್ಷಸಂಗಮದ ಅಧ್ಯಕ್ಷ ಸುದರ್ಶನ ಎಂ ವೇದಿಕೆಯಲ್ಲಿ ಹಾಜರಿದ್ದರು. ಸಂಚಾಲಕ ಶಾಂತರಾಮ ಕುಡ್ವ ಸ್ವಾಗತಿಸಿದರು. ರಾಘವೇಂದ್ರ ಭಂಡಾರ್ಕರ್ ವಂದಿಸಿದರು.

































