



ಮೂಡುಬಿದಿರೆ: ಮಂಗಳೂರು- ಕಾರ್ಕಳಕ್ಕೆ ಸಂಚರಿಸುತ್ತಿರುವ ಕೆ ಎಸ್ ಆರ್ ಟಿ ಸಿ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಹಲವಾರು ವರ್ಷಗಳ ತಿಕ್ಕಾಟದ ತರುವಾಯ ಕೊನೆಗೂ ಮಂಗಳೂರಿನಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳಕ್ಕೆ ಡಿಸೆಂಬರ 12ರಂದು ರಾಜ್ಯ ರಸ್ತೆ ಸಾರಿಗೆ ಬಸ್ಸು ಸಂಚರಿಸಲು ಪ್ರಾರಂಭಿಸಿದೆ.
ಇಂದು ಸುಮಾರು ಅರ್ಧ ಗಂಟೆ ವಿಳಂಬವಾಗಿ ಮಂಗಳೂರಿನಿಂದ ಹೊರಟ ಬಸ್ಸುಗೆ ಪ್ರಯಾಣಿಕರು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ.
ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿ ಆಶ್ರಯ!

ಆರ್.ಬಿ.ನ್ಯೂಸ್ ಸಾಮಾಜಿಕ ಜಾಲತಾಣದಲ್ಲಿ ವರದಿ ಪ್ರಕಟಿಸಿರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧೀನಕ್ಕೊಳಪಡುವ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿಯೇ ನಿಲ್ಲಿಸಿ ಮುಂದುವರೆಯುತ್ತಿರುವುದು ಪ್ರಯಾಣಿಕರಿಗೆ ಬಹಳ ತೊಂದರೆದಾಯಕವಾಗಿದೆ.
ಆದುದರಿಂದ ರಾಜ್ಯ ರಸ್ತೆ ಸಾರಿಗೆಯ ಬಸ್ಸುಗಳು ಮೂಡುಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ಒಳಗೆ ನಿಲ್ಲಿಸಿ ನಿಯಂತ್ರಣ ಕಚೇರಿಯ ಉಪಯೋಗವನ್ನು ಮಾಡುವುದು ಯುಕ್ತ. ಮೂಡುಬಿದಿರೆ ಪುರಸಭೆ ಹಾಗೂ ಪೊಲೀಸ್ ಇಲಾಖೆಯವರು ಅಲ್ಲಿರುವ ಇತರ ವಾಹನಗಳನ್ನು ನಿವಾರಿಸಿ ರಾಜ್ಯ ರಸ್ತೆ ಸಾರಿಗೆ ಹಾಗೂ ಹೊರ ರಾಜ್ಯದ ಬಸ್ಸುಗಳಿಗಾಗಿಯೇ ಇರುವ ಸ್ಥಳವನ್ನು ಒದಗಿಸಿಕೊಡುವುದು ಯೋಗ್ಯ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.
ವೇಳಾಪಟ್ಟಿ
ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 6:45 ಕ್ಕೆ ಹೊರಟು ನಂತೂರು, ಗುರುಪುರ, ಕೈಕಂಬ, ಎಡಪದವು, ಮೂಡಬಿದ್ರಿ, ಬೆಳುವಾಯಿ ಮೂಲಕ ಕಾರ್ಕಳಕ್ಕೆ ತೆರಳಲಿದೆ.

ಕಾರ್ಕಳದಿಂದ ಮೊದಲ ಬೆಳಿಗ್ಗೆ 6:45ಕ್ಕೆ ಹೊರಟು ಬೆಳುವಾಯಿ, ಮೂಡಬಿದ್ರಿ, ಎಡಪದವು, ಕೈಕಂಬ, ಗುರುಪುರ, ನಂತೂರು ಮೂಲಕ ಮಂಗಳೂರು ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ತಲುಪಲಿದೆ.
ಮಂಗಳೂರಿನಿಂದ ಕಾರ್ಕಳಕ್ಕೆ ಬೆಳಿಗ್ಗೆ 6:45, 8:30, 10:30, 12:15, 15:15, 16:00, 17:45ಗಂಟೆಗೆ ಕಾರ್ಕಳದಿಂದ ಮಂಗಳೂರಿಗೆ ಬೆಳಿಗ್ಗೆ 6:45, 8:30, 10:30, 12:15,14:15, 16:00, 17:45 , ಪ್ರಾಯೋಗೀಕವಾಗಿ ಬಸ್ಸ್ ಸಂಚಾರ ಗುರುವಾರ ಆರಂಭಗೊಂಡಿದೆ.
ಬಸ್ಸಲ್ಲಿ ಓರ್ವ ಸಿಬ್ಬಂದಿ, ಟೈಮ್ ಕೀಪರ್ ಹಾಗೂ ಬಸ್ ತಂಗುದಾಣದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದ್ದು, ಸದ್ಯ ಮಂಗಳೂರು ಮತ್ತು ಕಾರ್ಕಳದಿಂದ ತಲಾ ಎರಡು ಬಸ್ಗಳು ಸಂಚರಿಸಲಿವೆ ಎಂದು ಮಂಗಳೂರು ಕೆಎಸ್ಆರ್ಟಿಸಿ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹಿಂದೊಮ್ಮೆ ಓಡಾಡಿದ ಬಸ್
ಸುಮಾರು ವರ್ಷಗಳ ಹಿಂದೆ ಜಯಪುರ-ಶೃಂಗೇರಿ-ಕಾರ್ಕಳ-ಮೂಡುಬಿದಿರೆ ಮಾರ್ಗವಾಗಿ ಮಂಗಳೂರು ಕಡೆಗೆ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಅಧೀನಕ್ಕೊಳಪಟ್ಟ ಬಸ್ ವೊಂದು ಸಂಚಾರ ನಡೆಸುತ್ತಿತ್ತು.
ಮಧ್ಯಾಹ್ನ 1.10ರ ವೇಳೆಗೆ ಬಸ್ಸು ಕಾರ್ಕಳದ ವಿಸ್ತೃತ ಬಸ್ ನಿಲ್ದಾಣಕ್ಕೆ ಅಗಮಿಸಿ ಕ್ಷಣ ಹೊತ್ತಿನಲ್ಲಿ ನಿರ್ಗವಿಸುತ್ತಿತ್ತು.
ತಿಂಗಳು ಕಳೆಯುವ ಮುನ್ನವೇ ಆ ಬಸ್ಸು ಓಡಾಟ ಸಂಚಾರ ಮೊಟಕುಗೊಂಡಿರುವುದು ಗಮನಾರ್ಹವಾಗಿದೆ.




































