ಮೂಡುಬಿದಿರೆ ಬಸ್ ನಿಲ್ದಾಣವಲ್ಲ!ವಾಹನಗಳ ತಂಗುದಾಣ!!

Picture of RB NEWS

RB NEWS

Bureau Report

ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

  • ಮೇಲಿನ ಶೀರ್ಷಿಕೆ ಓದಿ ನಿಬ್ಬೇರಗಾಗುವುದು ಸಹಜವಾದರೂ, ಒಮ್ಮೆಯಾದರೂ ಮೂಡುಬಿದಿರೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿಯನ್ನು ಅಧ್ಯಯಿಸಿದರೆ ಎಲ್ಲವೂ ಅರ್ಥವಾಗುತ್ತದೆ.

ಮೂಡುಬಿದಿರೆ ಬಸ್ ನಿಲ್ದಾಣವೂ ಕೇವಲ ಖಾಸಗಿ ಬಸ್ ನಿಲುಗಡೆ ಗೊಂಡಿದ್ದರೆ ಯಾವುದೇ ಸಮಸ್ಸೆಗಳು ಇರುತ್ತಿರಲಿಲ್ಲ.

ಬಸ್ ನಿಲ್ದಾಣ ಪೂರ್ತಿ ಸಿಕ್ಕ ಸಿಕ್ಕಲಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತದಡ. ದ್ವಿಚಕ್ರ ವಾಹನಗಳು, ಕಾರು, ಟೆಂಪೋ… ಇತ್ಯಾದಿ ಒಳಗೊಂಡಿದೆ.

ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಲೆಂದು ಅಥವಾ ಬಸ್ ನಿಲ್ದಾಣ ಪರಿಸರದ ವ್ಯಾಪಾರ ಕೇಂದ್ರಗಳಿಗೆ ದಿನ ಬಳಕೆ ಪರಿಸರಗಳನ್ನು ವಿತರಿಸಲೆಂದು ಬರುವ ವಾಹನಗಳಿಗೆ ನಿರ್ದಿಷ್ಟ ಜಾಗವನ್ನು ಗೊತ್ತುಪಡಿಸಿದರೆ ಯಾವುದೇ ಸಮಸ್ಸೆಗಳು ಇರುತ್ತಿರಲಿಲ್ಲ.

ಆದರೆ ಉದ್ಯೋಗದ ಅಥವಾ ಇನ್ನಿತರ ಕೆಲಸ ಕಾರ್ಯಗಳೊಗಾಗಿ ಹೊರ ಊರುಗಳಿಗೆ ತೆರಳುವ ಪ್ರಯಾಣಿಕರು ತಮ್ಮ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲುಗಡೆಗೊಳಿಸಿ ಹೊರಟು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಶಿರ್ತಾಡಿ, ನಾರಾವಿ ಕಡೆ ಹೋಗುವಂತಹ ಬಸ್ ನಿಲುಗಡೆಗೊಳ್ಳುವ ಜಾಗ ಪೂರ್ತಿ ಖಾಸಗಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಂದ ಸಂಪೂರ್ಣ ತುಂಬಿರುತ್ತದೆ. ಇದು ಪ್ರತಿದಿನದ ಪರಿಸ್ಥಿತಿ ಆಗಿರುತ್ತದೆ.

ಬಸ್ ನಿಲ್ದಾಣ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಪುರಸಭಾ ಆಡಳಿತ ವರ್ಗ ಇನ್ನಷ್ಟು ಒತ್ತು ನೀಡಬೇಕು.

ಉಳಿದಂತೆ ಬಸ್ಸು ನಿಲ್ದಾಣದಿಂದ ಹೊರಕ್ಕೆ ಹೋಗುವ ರಸ್ತೆಯಲ್ಲಿ ಕಂಡು ಬರುತ್ತಿರುವ ದೊಡ್ಡ ದೊಡ್ಡ ಕೊಂಡಗಳು, ಏಕಮುಖ ರಸ್ತೆಯಲ್ಲಿರುವ ಹೊಂಡಗಳು ಹಾಗೆಯೇ ಇವೆ. ಅವುಗಳ ದುರಸ್ಥಿ ಕಾರ್ಯ ತುರ್ತಾಗಿ ನಡೆಸಬೇಕಾಗಿದೆ.

ಈ ಬಗ್ಗೆ ಪುರಸಭೆಯವರು, ಪೋಲಿಸ್ ಇಲಾಖೆ ಕಾರ್ಯ ಪ್ರವೃತ್ತರಾಗಿ ಮೂಡುಬಿದಿರೆ ಬಸ್ ನಿಲ್ದಾಣಕ್ಕೊಂದು‌ ಕಾರ್ಯಕಲ್ಪ ನೀಡಬೇಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top