ಮೂಡುಬಿದಿರೆ: ಪ್ರಕೃತಿಯನ್ನು ಪೂಜಿಸಿದರೆ ಮಾತ್ರ ಪಕ್ಷಿ ಸಂಕುಲಗಳ ಉಳಿವು ಸಾಧ್ಯ:ನಿತ್ಯಾನಂದ ಶೆಟ್ಟಿ

Picture of RB NEWS

RB NEWS

Bureau Report

ಮೂಡುಬಿದಿರೆ: ಪ್ರಕೃತಿಯನ್ನು ಪೂಜಿಸಿದರೆ ಮಾತ್ರ ಪಕ್ಷಿ ಸಂಕುಲಗಳ ಉಳಿವು ಸಾಧ್ಯ-ನಿತ್ಯಾನಂದ ಶೆಟ್ಟಿ

ಮೂಡುಬಿದಿರೆ:  ಸ್ವರ ಸಾಮ್ರಾಜ್ಯ ನಿರ್ಮಾಣ ಮಾಡುವ ಪಕ್ಷಿ ಸಂಕುಲಗಳ ಅಳಿವು ಉಳಿವು ನಮ್ಮ ಕೈ ಯಲ್ಲಿದೆ. ಪ್ರಕೃತಿಯಲ್ಲಿ ವಿಕೃತಿ ಕಂಡರೆ ದುರಂತ. ಪ್ರಕೃ ತಿಯನ್ನು ಆರಾದಿಸಿದರೆ ಪಕ್ಷಿಗಳ ಕಲರವ ಸಾಧ್ಯ ಎಂದು ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು.

ಅವರು ಮೂಡುಬಿದಿರೆ  ಮಾಸ್ತಿಕಟ್ಟೆ   ಸರಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ನಡೆದ ಗುಬ್ಬಚ್ಚಿಗೂಡು, ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಪಕ್ಷಿಗಳಿಗೆ ನೀರು, ಆಹಾರ ಇಡುವ ಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಬಿ.ಸೇಸಮ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹ ಶಿಕ್ಷಕರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top