ಮೂಡುಬಿದಿರೆ ಪುರಸಭೆಯೊಳಗಿನ ಹಣ್ಣು ವ್ಯಾಪಾರಸ್ಥರ ಅಪೀಲು!!

Picture of RB NEWS

RB NEWS

Bureau Report

ಮೂಡುಬಿದಿರೆ ಪುರಸಭೆಯ ಆಡಳಿತ ವಿಚಾರದಲ್ಲಿ ಒಂದಲ್ಲ ಒಂದು ವಿವಾದಗಳು ನಡೆಯುತ್ತಲೇ ಬಂದಿದೆ. ಸದಸ್ಯರುಗಳಲ್ಲಿ ಸಹಮತದ ಕೊರತೆ ಹಾಗೂ ಖಚಿತತೆಯ ಕೊರತೆಯಿಂದಾಗಿ ಪುರಸಭೆಯ ದೊಡ್ಡ ಕನಸಿನ ಮಾರುಕಟ್ಟೆ ಕಟ್ಟಡವು ಅರ್ಧಕ್ಕೇ ನಿಂತು ವರ್ಷಗಳಿಂದ ಲಾಗಾಯ್ತು ಮಳೆ ನೀರು ಕುಡಿಯುತ್ತುಂಟು.

ಸಣ್ಣ ನಿರ್ಲಕ್ಷ್ಯವೊಂದು ವಿರೊಧಿಗಳಿಗೆ ಸುಲಭ ಅಸ್ತ್ರವಾಗಿ ಕೈಗೆ ಸಿಕ್ಕಿದ್ದರಿಂದ ಕೋರ್ಟು ಮೆಟ್ಟಲೇರಿದರೂ ಕಟ್ಟಡ ನಿರ್ಮಾಣ ಪೂರ್ತಿಗೆ ಅನುಮತಿ ದೊರಕುತ್ತಿಲ್ಲ.ಇದು ಮೂಡುಬಿದಿರೆ ಪುರಸಭೆಯ ಬೇಜವಾಬ್ದಾರಿ ನಡೆಗಳಲ್ಲಿ ಒಂದು ಉದಾಹರಣೆ ಅಷ್ಟೆ.

ಕಳೆದ ವಾರ ಹಣ್ಣು ಹಂಪಲು ಮಾರಾಟ ಮಾಡುವವರ ವಾದ ವಿವಾದ ಗಲಾಟೆ ಅಬ್ಬರಗಳು ಎದ್ದಿತ್ತು.
ದೂರದೂರಿನವರು ಮೂಡುಬಿದಿರೆಗೆ ಬಂದು ವಾಹನಗಳಲ್ಲಿ ಕಿತ್ತಳೆ ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಪೇಟೆಯ ರಸ್ತೆಯುದ್ದಕ್ಕೂ ನಿಲ್ಲಿಸಿ ರಾತ್ರಿ ವರೆಗೂ ಮಾರಾಟ ಮಾಡುತ್ತಿರುವ ವಿಚಾರ.
ಸಂತೆ ಕಿಸ್ತು ಏಲಂಗೆ ನಿಂತವನಿಗೆ ಡೆಲ್ಲಿಯವನು ಬಂದು ಮಾರಾಟ ಮಾಡಿದರೂ ಲಾಭವೇ ಆಗಿರುವುದರಿಂದ ಆತನೂ ಪರವೂರಿನವರಿಂದ ಯಥೇಚ್ಚವಾಗಿ ಕಿಸ್ತು ಪಡೆದು ದೊಡ್ಡ ಸಲಾಂ ಹೊಡೆಯುತ್ತಾನೆ.

ಅದು ಮೂಡುಬಿದಿರೆ ಪುರಸಭೆಯವರ ಮಹಾ ದೊಡ್ಡ ತಪ್ಪು ಹಾಗೂ ನಿತ್ಯ ವ್ಯಾಪಾರಸ್ಥರ ಹೊಟ್ಟೆಗೆ ಬಡಿಯುವ ಅಪರಾಧವೇ ಸರಿ.
ಇಲ್ಲಿನ ವಾರದ ಸಂತೆ ಶುಕ್ರವಾರ.ಹಾಗಿರುವಾಗ ಆ ಒಂದು ದಿನ ಹೊರತು ಪಡಿಸಿದರೆ ಮಿಕ್ಕುಳಿದ ಆರು ದಿನಗಳಲ್ಲೂ ಪರವೂರಿನವರು ಬಂದು ರಸ್ತೆಯುದ್ದಕ್ಕೂ ವಾಹನಗಳನ್ನು ನಿಲ್ಲಿಸಿಟ್ಟು ವ್ಯಾಪಾರ ಮಾಡುವುದು ಅಕ್ಯಮ್ಯ ಅಪರಾಧವೇ ಸರಿ.
ಇನ್ನು ಕೆಲವರಲ್ಲಿ ಸ್ವಂತ ಅಥವಾ ಬಾಡಿಗೆಯ ಅಂಗಡಿ ಇರುವುದಾದರೂ ಪ್ರತ್ಯೇಕವಾಗಿ ರಸ್ತೆ ಬದಿಯಲ್ಲಿ ಹಣ್ಣುಗಳ ರಾಶಿ ಇಟ್ಟು ವ್ಯಾಪಾರ ಮಾಡುತ್ತಾರೆ.ಅದು ಯಾರು ಕಲಿಸಿಕೊಟ್ಟ ವ್ಯಾಪಾರ ಬುದ್ಧಿವಂತಿಕೆ ಎಂಬುದೂ ರಹಸ್ಯವಾಗಿದೆ.

ಪುರಸಭೆಯ ಗಣ್ಯ ಸದಸ್ಯರುಗಳಲ್ಲಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಹುದ್ದೆಯ ಘನತೆಯನ್ನು ಉಳಿಸಿಕೊಂಡು ಜವಾಬ್ದಾರಿಯನ್ನು ತೋರಿಸುತ್ತಾರೆ.ಇನ್ನು ಕೆಲವರು ಈ ಹುದ್ದೆಯ ಜವಾಬ್ದಾರಿಯನ್ನು ವ್ಯಾಪಾರ ಮಾಡಿಕೊಳ್ಳುತ್ತಿರುವುದರಿಂದಲೆ ಕೆಲವೊಂದು ಸಮಸ್ಯೆಗಳು ಬಿಗಡಾಯಿಸುವುದು ಸತ್ಯ.
ತನಗೆ ವಾರ್ಷಿಕ ಕಿಸ್ತು ಪಾವತಿಗೋಸ್ಕರ ತಾನು ಎಲ್ಲ ವ್ಯಾಪಾರಸ್ಥರನ್ನೂ ಬೆಂಬಲಿಸಬೇಕಾಗುತ್ತದೆ ಎನ್ನುವ ಆತನ ವಾದದಲ್ಲಿ ಹುರಿಳಿದೆಯಾದರೂ ಪುರಸಭೆಯು ಮಾತ್ರ ತನ್ನ ನಡವಳಿಕೆಯಲ್ಲಿ ಸಭ್ಯತೆಯನ್ನು ಮೀರುವುದೆಂದರೆ ಭ್ರಷ್ಟಾಚಾರವಿದೆಯೆನ್ನುವ ಆರೋಪವು ಸಹಜವಾಗಿ ಕೇಳಿಬರುತ್ತದೆ.
ಸ್ಥಳೀಯ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಅವರು ಮೂಡುಬಿದಿರೆ ಪುರಸಭೆಯ ಕೆಲವೊಂದು ಅಸಭ್ಯತೆಯ ಪಾಲನೆಯನ್ನು ನೇರವಾಗಿ ಜಿಲ್ಲಾಧಿಕಾರಿಗೆ ವಿವರಿಸುವ ಜವಾಬ್ದಾರಿಯನ್ನು ಪಾಲಿಸಿಕೊಳ್ಳುವ ಅನಿವಾರ್ಯತೆ ಖಂಡಿತ ಇದೆ.
ಹಣ್ಣು ಹಂಪಲು ಮಾರಾಟಗಾರರು ಚಲಿಸುವ ಗಾಡಿಯಲ್ಲಿ ಪುರಸಭಾ ವ್ಯಾಪ್ತಿಯ ಪೇಟೆಯಲ್ಲಿ ವಾರ ಪೂರ್ತಿ ವ್ಯಾಪಾರ ಮಾಡುವ ಅತಿಕ್ರಮವನ್ನು ಇದೀಗ ಚುನಾವಣೆ ನಿಮಿತ್ತ ಬದಲಿಗೆ ಬಂದಿರುವ ಪುರಸಭಾ ಅಧಿಕಾರಿಯವರು ತಡೆಹಿಡಿಯಬೇಕಾಗಿದೆ.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top