ಮೂಡುಬಿದಿರೆ : ಟೀಚರ್ಸ್ ಬ್ಯಾಂಕ್ ವತಿಯಿಂದ ರಾಯಿ ರಾಜಕುಮಾರ ಮೂಡುಬಿದಿರೆ ಅವರಿಗೆ ಸನ್ಮಾನ
ಮೂಡುಬಿದಿರೆ: ಸ್ಥಳೀಯ ಟೀಚರ್ಸ್ ಬ್ಯಾಂಕಿನಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಸಂಬಂಧ ವಿವಿಧ ಕಾರ್ಯಕ್ರಮ ಆಯೋಜಿಸಲಾಯಿತು.
ಎ ಜಿ ಸೋನ್ಸ್ ಐ ಟಿ ಐ ನಿವೃತ್ತ ಪ್ರಾಂಶುಪಾಲ ಜಯರಾಮ ಶೆಟ್ಟಿಗಾರ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಿವೃತ್ತ ಶಿಕ್ಷಕರಾದ ಜಯರಾಮ ಶೆಟ್ಟಿಗಾರ ಹಾಗೂ ರಾಯಿ ರಾಜಕುಮಾರ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಶಾಲಾ ಶಿಕ್ಷಕ ಮಹಾವೀರ ಎಂ, ಸುನೀತಾ ತೆರೇಸಾ ಪಿಂಟೋ, ಅಲ್ವಿರಾ ರೇಷ್ಮಾ, ಬ್ಯಾಂಕಿನ ಶಾಖಾಧಿಕಾರಿ ಸಂಧ್ಯಾ, ಸೌಮ್ಯ, ಪ್ರಶಾಂತ್ ಹಾಜರಿದ್ದರು































