ಮೂಡುಬಿದಿರೆ ಗೋಪಾಲಕೃಷ್ಣ ದೇವಸ್ಥಾನದ 108ನೇ ವರ್ಷದ ಮೊಸರು ಕುಡಿಕೆ ಉತ್ಸವ
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಸ್ಥಳೀಯ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಆಗಸ್ಟ್ 25ರಂದು ಸ್ವರಾಜ್ಯ ಮೈದಾನದಲ್ಲಿ ಬೆಳಿಗ್ಗೆ ಗಂ. 9:30ರಿಂದ ಪುರುಷ, ಮಹಿಳೆಯರಿಗೆ-ಹಗ್ಗ ಜಗ್ಗಾಟ, ಲಗೋರಿ ಸ್ಪರ್ಧೆ; ಪುರುಷರಿಗೆ ಮಾತ್ರ ಮಾನವ ಗೋಪುರ, ತಪ್ಪಂಗೈ ಸ್ಪರ್ಧೆ; ಮಹಿಳೆಯರು, ಮಕ್ಕಳಿಗೆ-ಒಂದು ಕಾಲ ಓಟ, ಮಡಿಕೆ ಹೊಡೆಯುವುದು ನಡೆಯಲಿದೆ. ಮಕ್ಕಳಿಗೆ ಮಾತ್ರ ಗೋಣಿಚೀಲ ಓಟ ಸ್ಪರ್ಧೆ. ನಿಧಿ ಶೋಧನೆ ಸ್ಪರ್ಧೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಫೌಂಡೇಶನ್ ನ ಮನು ಆಚಾರ್ಯ ಪತ್ರಿಕಾ ತಿಳಿಸಿದ್ದಾರೆ.

ಗೋಪಾಲಕೃಷ್ಣ ದೇವಾಲಯದಲ್ಲಿ ಆಗಸ್ಟ್ 25 ಆದಿತ್ಯವಾರದಂದು ಮಧ್ಯಾಹ್ನ ಗಂ. 2 ರಿಂದ ಸುರತ್ಕಲ್ ಸ್ವರ ಶ್ರೀ ಭಜನಾ ಮಂಡಳಿಯ ಸ್ಮಿತಾ ಹೊಳ್ಳ ಹಾಗೂ ಭಾರತಿ ಹರಿಕೃಷ್ಣ ಪೆಜತಾಯರ ತಂಡದಿಂದ ಅಷ್ಟೋತ್ತರ ಶತಕದ ಭಜನಾ ಸಂಕೀರ್ತನೆ ಪ್ರಾರಂಭವಾಗಲಿದೆ.
ದಿ.26 ರಂದು ಸೋಮವಾರ ಬೆಳಿಗ್ಗೆ ಮುದ್ದುಕೃಷ್ಣ ಸ್ಪರ್ಧೆ, ಬಹುಮಾನ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂ.2 ರಿಂದ ಚಂದ್ರೋದಯದ ತನಕ ನಿರಂತರ ಭಜನೆ, ಮಹಾಪೂಜೆ, ಅರ್ಜಿ ಪ್ರದಾನ ನಡೆಯಲಿದೆ.
ದಿ.27 ಮಂಗಳವಾರ ಬೆಳಗ್ಗೆ ಗಂ.9 ರಿಂದ ಹೋಮ, ಕಳಶಾಭಿಷೇಕ, ತುಳಸಿ ಅರ್ಚನೆ, ಮಂಗಳೂರು ಗಾನ ಗಂಗೋತ್ರಿ ಸಂಗೀತ ವಿದ್ಯಾಲಯದವರಿಂದ ಭಕ್ತಿ ಸಂಗೀತ ನಡೆಯಲಿದೆ. ಅಪರಾನ್ಹ ಗಂ.3ರಿಂದ ದೇವರ ಶುಭಾಯಾತ್ರೆ, ಮೊಸರು ಕುಡಿಕೆ ಉತ್ಸವ, ರಾತ್ರಿ ಉತ್ಸವ ಮೂರ್ತಿಯ ಜಲ ಸ್ತಂಭನ ನಡೆಯಲಿದೆ.














