ಮೂಡುಬಿದಿರೆ: ಗಬ್ಬೆದ್ದು ನಾರುತ್ತಿರುವ ಪೊನ್ನೆಚಾರಿ

Picture of RB NEWS

RB NEWS

Bureau Report

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಪೊನ್ನೆಚಾರಿ ಚರ್ಚ್ ಹಿಂಬದಿ ಪ್ರದೇಶದಲ್ಲಿ ಗಬ್ಬುನಾತ ಬೀರುತ್ತಿದೆ. ಇದಕ್ಕೆ ಕಾರಣರಾಗಿರುವ ಸ್ವೀಟ್ ತಯಾರಕ ಸಂಸ್ಥೆಯ ವಿರುದ್ಧ ಸೂಕ್ತ ಕೈಗೊಳ್ಳುವಲ್ಲಿ ಮೂಡುಬಿದಿರೆ ಪುರಸಭೆಯ ಆಡಳಿತ ವರ್ಗ ಸಂಪೂರ್ಣ ವೈಫಲ್ಯವಾಗಿ ಎಂಬ ಆರೋಪವು ವ್ಯಾಪಕವಾಗಿ ಕೇಳಿಬರುತ್ತಿವೆ.

ರಾಜನ್ ಸ್ಟೀಟ್ ಕಾರ್ಮಿಕರು ವಾಸವಾಗಿರುವ ಪರಿಸರದಲ್ಲಿ ಈ ಸಮಸ್ಸೆ ತಲೆದೋರಿದೆ‌. ಜನಗಣತೀಗೆ ಅಗತ್ಯವಾದ ಮೂಲ ಸೌಕರ್ಯ ಇಲ್ಲಿಲ್ಲದೇ ಇರುವುದು ಸಮಸ್ಸೆ ತಲೆದೋರಲು ಮೂಲ ಕಾರಣವಾಗಿದೆ.


ಈಗ ಮತ್ತೇ ಸಮಸ್ಸೆ ಬಿಗಡಾಯಿಸಿದ್ದು, ಪರಿಸರದಲ್ಲಿ ಬೀರುತ್ತಿರುವ ಗಬ್ಬುನಾತದಿಂದಾಗಿ ಪರಿಸರದಲ್ಲಿ ಜೀವನ ಸಾಗಿಸುವ ಇತರ ನಾಗರಿಕರು ನಾನಾ ಸಂಕಷ್ಟವನ್ನು ಎದುರಿಸುವಂತಾಗಿದೆ.

ರಾಜನ್ ಸ್ವೀಟ್ ಕಾರ್ಮಿಕರು ನೆಲೆಸಿರುವ ಪ್ರದೇಶದಿಂದ ಅತ್ಯಂತ ದುರ್ವಾಸನೆ ಭರಿತ ಕೊಳಚೆ ನೀರು ಸಾರ್ವಜನಿಕ‌ ಪ್ರದೇಶಕ್ಕೆ ಹರಿದು ಬರುತ್ತಿದೆ.

ಈ ಬಗ್ಗೆ ಸ್ಥಳೀಯ ನಿವಾಸಿಗಳು ಪುರಸಭಾ ಆಡಳಿತ ವರ್ಗಕ್ಕೆ ದೂರು ನೀಡಿದರೂ ಸಕರಾತ್ಮಕವಾಗಿ ಸ್ಪಂದಿಸುದಿಲ್ಲ. ಸ್ಥಳೀಯ ಪುರಸಭಾ ಸದಸ್ಯರಿಗೆ ಕರೆ ಮಾಡಿದರೂ ಅಲ್ಲಿಯೂ ಕೂಡ ಸ್ಪಂದಿನೆ ಸಿಗುತ್ತಿಲ್ಲ ಎಂದು ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಅದು ಅಸಾಧ್ಯವಾದಲ್ಲಿ ನಾಗರಿಕರು ಬೀದಿಗೆ ಇಳಿದು ಹೋರಾಟ ನಡೆಸಬೇಕಾದ ಪರಿಸ್ಥಿತಿಯೂ ನಿರ್ಮಾಣವಾದರೂ ಅಶ್ಚರಿ ಇಲ್ಲ.

ಸಾಧಕ-ಭಾದಕಗಳಿಗೆ ಮೂಡುಬಿದಿರೆ ಪುರಸಭೆ ಆಡಳಿತ ವರ್ಗ ನೇರ ಹೊಣೆಯಾಗಬೇಕಾದಿತ್ತು ಎಂಬ ಎಚ್ಚರಿಕೆಯೂ ಇರಬೇಕು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top