ಮೂಡುಬಿದಿರೆ: ಕೋಟಕ್ ಮಹೀಂದ್ರಾ ಸಂಸ್ಥೆ ಯಿಂದ ಸಂಮಾನ
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮಂಗಳೂರು ಕೋಟಕ್ ಮಹೀಂದ್ರಾ ಸಂಸ್ಥೆಯ ಮೂಡುಬಿದಿರೆ ಶಾಖೆಯ ವತಿಯಿಂದ ನಿವೃತ್ತರ ಸಂಮಾನ ಕಾರ್ಯಕ್ರಮ ಸೆಪ್ಟೆಂಬರ್ 20ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಿತು. ಒಬ್ಬರು ಆರ್ಮಿ ನಿವೃತ್ತ ರೊಂದಿಗೆ ಇತರ ಹದಿನಾಲ್ಕು ಮಂದಿ ನಿವೃತ್ತರು ಸಂಮಾನಿಸಲ್ಪಟ್ಟರು.
ಮಂಗಳೂರು ಕೋಟಕ್ ಮಹೀಂದ್ರಾ ಕಂಪೆನಿಯ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಶಾಖಾಧಿಕಾರಿ ರಾಹುಲ್ ಆಚಾರ್ಯ, ಅವರು ಸಂಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಛೇರಿಯ ಸಿಂಚನ ಅವರು ಸ್ವಾಗತಿಸಿ, ವಂದಿಸಿದರು.





































