ಉಚಿತ ಕಣ್ಣು, ಮೂಗು, ಗಂಟಲು, ಆರೋಗ್ಯ ತಪಾಸಣಾ ಶಿಬಿರ

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಹಾಗೂ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಆಶ್ರಯದಲ್ಲಿ ಮಂಗಳೂರು ಎ ಜೆ ವೈದ್ಯಕೀಯ ಮಹಾವಿದ್ಯಾಲಯದ 35 ಮಂದಿ ತಂಡ ಮೂಡುಬಿದಿರೆ ಕನ್ನಡ ಭವನದಲ್ಲಿ ಆಗಸ್ಟ್ 18ರಂದು ಉಚಿತ ಕಣ್ಣು, ಕಿವಿ, ಮೂಗು, ಗಂಟಲು, ತಪಾಸಣೆ ಹಾಗೂ ಆರೋಗ್ಯ ಶಿಬಿರವನ್ನು ನಡೆಸಿದರು.
ಇದೇ ಸಂದರ್ಭದಲ್ಲಿ ಉಚಿತ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಹಾಗೂ ಮಧುಮೇಹ, ರಕ್ತದ ಒತ್ತಡ ಹಾಗೂ ಹೃದಯ ಸಂಬಂಧಿ ರೋಗ ತಪಾಸಣೆಗಳನ್ನು ನಡೆಸಲಾಯಿತು.
ಮೂಡುಬಿದಿರೆ 914 ಫಲಾನುಭವಿಗಳಿಗೆ ಪ್ರಯೋಜನ
ಪವರ್ ಫ್ರೆಂಡ್ಸ್ ಬೆದ್ರ ಹಾಗೂ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಆಶ್ರಯದಲ್ಲಿ ಕನ್ನಡ ಭವನದಲ್ಲಿ ನಡೆದ ಶಿಬಿರದಲ್ಲಿ 914 ಮಂದಿ ಸದುಪಯೋಗವನ್ನು ಪಡೆದರು.
ಸಾಮಾನ್ಯ ಆರೋಗ್ಯ ತಪಾಸಣೆ 61 ಮಂದಿ, ಕಣ್ಣಿನ ತಪಾಸಣೆ 308 ಮಂದಿ, ಕಿವಿ, ಮೂಗು, ಗಂಟಲು ತಪಾಸಣೆ 57 ಮಂದಿ, ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ 49 ಮಂದಿ, ದಂತ ತಪಾಸಣೆ 70 ಮಂದಿ, ಮಧುಮೇಹ, ರಕ್ತದ ಒತ್ತಡ ಪರೀಕ್ಷೆ 285 ಮಂದಿ, ಹೃದಯ ಸಂಬಂಧಿ ರೋಗ ತಪಾಸಣೆ 84 ಮಂದಿ, ಹೀಗೆ ಒಟ್ಟು 914 ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಎ ಜೆ ವೈದ್ಯಕೀಯ ಮಹಾವಿದ್ಯಾಲಯದ 35 ಮಂದಿ ತಂಡ ಈ ಶಿಬಿರದಲ್ಲಿ ಸಹಾಯವನ್ನು ಮಾಡಿದ್ದರು ಎಂದು ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್, ಇನ್ನರ್ ವೀಲ್ ಅಧ್ಯಕ್ಷೆ ಬಿಂದಿಯ ತಿಳಿಸಿರುತ್ತಾರೆ.

































