ಮೂಡುಬಿದಿರೆಯ ಪ್ರಸಿದ್ಧ ಜವುಳಿ ಮಳಿಗೆ “ಮಯೂರಿ ಸಿಲ್ಕ್ಸ್”

ಮೂಡುಬಿದಿರೆಯಲ್ಲಿರುವ ಜವುಳಿ ಅಂಗಡಿಗಳಲ್ಲಿ “ ಮಯೂರಿ ಸಿಲ್ಕ್ಸ್”ಬಹಳ ಜನಪ್ರಿಯತೆಯನ್ನು ಪಡೆದಿರುತ್ತದೆ.
ತನ್ನದೇ ವಿಶಿಷ್ಟವಾದ ವ್ಯಾಪಾರ ವ್ಯವಹಾರದಿಂದಾಗಿ ಸಂಸ್ಥೆಯು ಶ್ರೇಷ್ಠತೆಯ ಉತ್ತುಂಗಕ್ಕೇರಿದೆಯೆಂದೇ ಹೇಳಬಹುದು. ಬಟ್ಟೆ,ಸೀರೆಗಳ,ಫ್ರಾಕುಗಳ ಸಂಗ್ರಹದಲ್ಲಿಯೂ ತಯಾರಕರೊಂದಿಗಾಗಲಿ, ವಿತರಕರೊಡನೆಯಾಗಲಿ ಯಾವುದೇ ರಾಜಿಮಾಡಿಕೊಳ್ಳದೆ ಗ್ರಾಹಕರಿಗೆ ನಿರ್ವಂಚನೆಯಿಂದ ಬಟ್ಟೆ ಮಾರಾಟ ಮಾಡುವ ಹೆಗ್ಗಳಿಕೆಗೆ ಪಾತ್ರವಾದ್ದರಲ್ಲಿ ಈ ಮಯೂರಿ ಸಿಲ್ಕ್ಸ್ ಮೊದಲನೆಯದ್ದು ಎಂದೇ ಹೇಳಬಹುದು.
ಮಾರಾಟದ ಬಟ್ಟೆ ಬರೆಗಳು ಸೀರೆ ಪಂಚೆ ಅಂಗಿಗಳು ಇನ್ನು ಎಲ್ಲ ವಿಧದ ಬಟ್ಟೆಗಳು,ರೆಡಿಮೇಡ್ ಫ್ರಾಕುಗಳು ,ಹೊಸ ಮಾದರಿಯ ವಿನ್ಯಾಸದ ಬಟ್ಟೆಗಳ ಅಮೋಘ ಸಂಗ್ರಹದಿಂದಾಗಿ ಅಸಂಖ್ಯ ರೀತಿಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಮಯೂರಿ ಸಿಲ್ಕ್ಸ್ ಯಶಸ್ಸನ್ನು ಕಂಡಿದೆ.

ಮೂಡುಬಿದಿರೆಯಂಥ ಪೇಟೆಯಲ್ಲಿ ಸ್ಪರ್ಧಾತ್ಮಕವಾದ ಜವುಳಿ ವ್ಯಾಪಾರಗಳ ನಡುವೆ ಚಿಕ್ಕದಾಗಿದ್ದ ಅಂಗಡಿ ಕಟ್ಟಡವನ್ನು ವಿಸ್ತರಿಸಲು ಹೆಚ್ಚಿನ ಬಂಡವಾಳ ಹೂಡಿ ಮೂರು ಮಹಡಿಯ ಕಟ್ಟಡವನ್ನು ನಿರ್ಮಿಸಿರುವುದು ಗ್ರಾಹಕರ ಪ್ರೀತಿ ವಿಶ್ವಾಸ ಮತ್ತು ಅಭಿಮಾನಗಳ ಬೆಂಬಲವೇ ಮುಖ್ಯ ಪ್ರಚೋದನೆಯಾಗಿತ್ತು ಎಂದೇ ಹೇಳಬೇಕು. ವಿಶಾಲ ಕೊಠಡಿ ಹಾಗೂ ಒಳಾಂಗಣ ಹಾಲ್ ಇರುವ ಹವಾನಿಯಂತ್ರಿತ ಕಟ್ಟಡದೊಳಗೆ ಬಟ್ಟೆಗಳ ಆಯ್ಕೆಗೆ ಅಮೋಘವಾದ ತೃಪ್ತಿಯ ಅನುಭವ ದೊರಕುತ್ತದೆ.
ಅಷ್ಟಕ್ಕೂ ಮುಖ್ಯವಾದ ಸಂಗತಿಯೆಂದರೆ, ಅಲ್ಲಿನ ನೌಕರರ ಸರಳ ಹಾಗೂ ಸೌಜನ್ಯದ ವ್ಯವಹಾರ ನುಡಿಗಳು, ಬೇಸರವಿಲ್ಲದ ಸ್ಪಂದನ ಇತ್ಯಾದಿ ಗ್ರಾಹಕರಿಗೊಂದು ಹೆಚ್ಚುವರಿ ತೃಪ್ತಿಯನ್ನು ಕೊಡುತ್ತದೆ.


ಕಳೆದ ಹದಿನೆಂಟು ವರ್ಷಗಳಿಂದ ಲಾಗಾಯ್ತು ಮೂಡುಬಿದಿರೆಯ ಆಸುಪಾಸಿನ ಇಪ್ಪತ್ತೈದು ಗ್ರಾಮಗಳಿಗಷ್ಟೇ ಅಲ್ಲದೆ ನೆರೆಯ ಕಾರ್ಕಳ,ಅಜೆಕಾರು, ಬಜಗೋಳಿ, ನಾರಾವಿ ,ಅಳದಂಗಡಿ, ವೇಣೂರು,ಗುರುಪುರ ಕೈಕಂಬ ಊರುಗಳಲ್ಲೂ ಮಯೂರಿ ಸಿಲ್ಕ್ಸ್ ಮನೆಮಾತಾಗಿದೆ. ಅತ್ತಿನವರು ಕೂಡ ಈ ಜವುಳಿ ಮಳಿಗೆಯ ಗ್ರಾಹಕರಾಗಿರುತ್ತಾರೆ.
ಈ ಮಳಿಗೆಯ ಸಂಸ್ಥಾಪಕ ರಾಜೇಂದ್ರ ಜೈನ್ ಅವರು ಜವುಳಿ ವ್ಯಾಪಾರಸ್ಥರೊಡನೆಯೆ ಹತ್ತಾರು ವರ್ಷಗಳ ಕಾಲ ಜೊತೆಗಿದ್ದು ಬಟ್ಟೆ ವ್ಯಾಪಾರ,ವ್ಯವಹಾರದ ಬಗ್ಯೆ ಆಳವಾದ ಜ್ಞಾನ ಪಡೆದುಕೊಂಡಿದ್ದವರು. ಹಾಗಾಗಿಯೇ ಮೂಡುಬಿದಿರೆಯಲ್ಲೊಂದು ಗ್ರಾಹಕ ಸ್ನೇಹಿ ಮಳಿಗೆಯೊಂದನ್ನು ಹೊಸ ಬಗೆಯಲ್ಲಿ,ಹೊಸ ಭಾಷೆಯಲ್ಲಿ,ನವೀನ ರೂಪದಲ್ಲಿ ಸ್ಥಾಪಿಸಬೇಕು ಎಂದು ಮುಂದಡಿಯಿಡುವುದಕ್ಕೆ ಸಾಧ್ಯವಾಯಿತು.

ರಾಜೇಂದ್ರ ಜೈನ್
ತುಂಬಾ ಸಮಾಧಾನಿಯಾಗಿರುವ ರಾಜೇಂದ್ರ ಜೈನ್ ಮಳಿಗೆಯಲ್ಲಿ ನೌಕರಿ ಮಾಡುವವರಿಂದ ಕಟ್ಟಕಜೆಯ ಗ್ರಾಹಕನವರೆಗೂ ಸಮಚಿತ್ತದಿಂದ ಮಾತನ್ನಾಡುವ ಸ್ಥಿತಪ್ರಜ್ಞ ಎಂದರೆ ತಪ್ಪಾಗಲಾರದು.
ಆ ಎಲ್ಲ ಕಾರಣಗಳು,ವಿಶೇಷಗಳು, ದಿನದಿನಕ್ಕೆ ಬದಲಾಗುತ್ತಿರುವ ಆಧುನಿಕ ಫ್ಯಾಶನಿಗೆ ಹೊಂದಿಕೊಂಡಂತೆ ಮಾದರಿ ಬಟ್ಟೆ, ಸೀರೆ,ಫ್ರಾಕುಗಳನ್ನು ಖರೀದಿಸಿ ತಂದು ಗ್ರಾಹಕರ ಬೇಡಿಕೆಗೆ ಸ್ಪಂದಿಸುತ್ತಿರುವುದರಿಂದ ಮಯೂರಿ ಸಿಲ್ಕ್ಸ್ ಜವುಳಿ ಅಂಗಡಿಯು ಉಭಯ ಜಿಲ್ಲೆಗಳಲ್ಲಿ ಕುಟುಂಬದ ಮಾತಾಗಿದೆ.
ಮೂಡುಬಿದಿರೆ ಪೇಟೆಯಲ್ಲಿ ಆಳ್ವಾಸ್ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಬಲಕ್ಕೆ ಕಾಣುತ್ತಿರುತ್ತದೆ “ಮಯೂರಿ ಸಿಲ್ಕ್ಸ್”.
–ವಿ. ಕೆ. ವಾಲ್ಪಾಡಿ






























