ಮೂಡುಬಿದಿರೆಯಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮಾನವ ಸರಪಳಿ
ಮೂಡುಬಿದಿರೆ: ಸ್ಥಳೀಯ ಹಿಂದೂ ಹಿತರಕ್ಷಣಾ ಸಮಿತಿಯವರು ಪ್ರಸ್ತುತ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಅಲ್ಲಿರುವ ಹಿಂದುಗಳ ಸುರಕ್ಷತೆಗೆ ಸರಕಾರ ಕ್ರಮ ಕೈಗೊಳ್ಳಲು ಆಗ್ರಹಿಸಿ ಮೂಡುಬಿದಿರೆಯಲ್ಲಿ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮಾನವ ಸರಪಳಿ ನಡೆಸಿದರು.




ಹಿಂದು ಪರ ಜನ ಜಾಗೃತಿಯನ್ನು ಉಂಟುಮಾಡಲು ನಿಟ್ಟಿನಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ನಿಶ್ಮಿತಾ ಟವರ್ಸ್ ಬಳಿಯಿಂದ ಮೂಡುಬಿದಿರೆ ಬಸ್ಸು ನಿಲ್ದಾಣದವರೆಗೆ ಮಾನವ ಸರಪಳಿಯನ್ನು ನಿರ್ಮಿಸಿದರು.
ಇದೇ ಸಂದರ್ಭದಲ್ಲಿ ಹಿಂದುಗಳ ಪುಣ್ಯಭೂಮಿ ಭಾರತದಲ್ಲಿ ಹಿಂದುಗಳ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕರ ಸಂಗತಿ. 1947ರಲ್ಲಿ ಪಾಕಿಸ್ತಾನದಲ್ಲಾದ ಹಿಂದೂಗಳ ಹತ್ಯಾಕಾಂಡ, 2024ರಲ್ಲಿ ಬಾಂಗ್ಲಾದಲ್ಲಿ ನಡೆಯುತ್ತಿರುವುದು ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿದರು. ಬಾಂಗ್ಲಾದೇಶದ ಹಿಂದುಗಳಿಗೆ ನಾವೆಲ್ಲ ಬೆಂಬಲ ನೀಡಬೇಕಾಗಿದೆ. ಆದುದರಿಂದ ಎಲ್ಲ ಹಿಂದುಗಳು ಎಚ್ಚರಗೊಂಡು ದುಷ್ಟ ಶಕ್ತಿಗಳನ್ನು ದಮನಿಸುವ ಬಗ್ಗೆ ನಿದ್ದೆಯಿಂದ ಎದ್ದೇಳಬೇಕಾಗಿದೆ ಎಂದು ಕರೆಕೊಟ್ಟರು.
ಫೋಟೋ ವರದಿ : ರಾಯಿ ರಾಜ ಕುಮಾರ ಮೂಡುಬಿದಿರೆ




































