ಮೂಡುಬಿದಿರೆಯಲ್ಲಿ ಶೋಭಾಯಾತ್ರೆ: ವಾಹನ ಸಂಚಾರ ಮಾರ್ಗ ಬದಲಾವಣೆ

Picture of RB NEWS

RB NEWS

Bureau Report


ಮೂಡುಬಿದಿರೆ : ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಸಮಾಜ ಮಂದಿರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಬಿದ್ರೆ ವತಿಯಿಂದ 61 ನೇ ವರ್ಷದ ಶ್ರೀ ಗಣೇಶೋತ್ಸವ ಪ್ರಯುಕ್ತ ಶೋಭಾಯಾತ್ರೆ ಉತ್ಸವ ಕಾರ್ಯಕ್ರಮ ಪ್ರಯುಕ್ತ ಸೆ. 11 ರಂದು ಮಧ್ಯಾಹ್ನ 01.00 ಗಂಟೆಯಿಂದ ಮೆರವಣಿಗೆ ಇರುವುದರಿಂದ ಮೂಡಬಿದ್ರೆ ಪೇಟೆಯಲ್ಲಿ ಜನರು ಸೇರುವುದರಿಂದ ವಾಹನ ಸಂಚಾರದ ಬಗ್ಗೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ.

ಸಾರ್ವಜನಿಕರು ತಮ್ಮ ವಾಹನವನ್ನು ಸಮಯ 12.00 ಗಂಟೆಯ ನಂತರ ಮೂಡಬಿದ್ರೆಯ ನಗರಕ್ಕೆ ಬಾರದೇ ಮೂಡಬಿದ್ರೆಯ ಹೊರ ವರ್ತುಲಾ (ಬೈಪಾಸ್) ರಸ್ತೆಯಲ್ಲಿ ಹಾಗೂ ಬದಲಿ ಮಾರ್ಗದಲ್ಲಿ ಮೆರವಣಿಗೆಯು ಮುಗಿಯುವ ವರೆಗೂ ಸಂಚರಿಸುವುದು ಮತ್ತು ಸೆ.11 ರಂದು ಬೆಳಿಗ್ಗೆ ಸಮಯ 06.00 ಗಂಟೆಯಿಂದ ಮೆರವಣಿಗೆ ಕಾರ್ಯಕ್ರಮ ಮುಗಿಯುವವರೆಗೂ ಮೂಡಬಿದಿರೆ ಪೇಟೆಯ ರಸ್ತೆಯ ಬದಿಯಲ್ಲಿ ವಾಹನವನ್ನು ಪಾರ್ಕಿಂಗ್ ಮಾಡದಿರುವುದು ಮಾಡಿದ್ದಲ್ಲಿ ಟೋಯಿಂಗ್ ವಾಹನದ ಮುಖಾಂತರ ಟೋಯಿಂಗ್ ಮಾಡಲಾಗುವುದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ,

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top