




ಮೂಡುಬಿದಿರೆಯಲ್ಲಿ ಶಾಸಕರಿಂದ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮುಲ್ಕಿ- ಮೂಡುಬಿದರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಡಿ. 3 ರಂದು ಮೂಡುಬಿದಿರೆ ತಾಲೂಕು ಕಚೇರಿಯ ಸೇವಕ ಕಚೇರಿಯಲ್ಲಿ ನಾಗರಿಕರ ಹಲವಾರು ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಕೈಗೊಳ್ಳಲು ಸಂಬಂಧಪಟ್ಟವರಿಗೆ ಆದೇಶಿಸಿದರು.



ಪ್ರತಿವಾರವೂ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಲೋಪದೋಷಗಳು ತತ್ ಕ್ಷಣ ಪರಿಹಾರಗೊಂಡು ಸಾರ್ವಜನಿಕರಿಗೆ ಸಾಕಷ್ಟು ಪ್ರಯೋಜನವಾಗಿರುತ್ತದೆ ಎಂದು ಸ್ವತಹ ಸಾರ್ವಜನಿಕರೇ ಪ್ರತಿಕ್ರಿಯಿಸಿದ್ದಾರೆ.




































