ಮೂಡುಬಿದಿರೆಯಲ್ಲಿ ವಿಶ್ವ ಹೃದಯ ದಿನಾಚರಣೆಯಂದು ಬೃಹತ್ ವಾಕಥಾನ್

Picture of RB NEWS

RB NEWS

Bureau Report

ಮೂಡುಬಿದಿರೆ: ವಿಶ್ವ ಹೃದಯ ದಿನಾಚರಣೆ ಸೆಪ್ಟೆಂಬರ್ 29ರಂದು ರೋಟರಿ ಶಾಲೆಯಿಂದ ಕನ್ನಡ ಭವನದ ತನಕ ಬೃಹತ್ ವಾಕಥಾನ್ ನಡೆಯಲಿದೆ. ಸುಮಾರು 300 ಮಂದಿ ಭಾಗವಹಿಸುವ ಈ ಜಾಥಾಕ್ಕೆ ಮೂಡುಬಿದಿರೆಯ ಡಾಕ್ಟರ್ಸ್ ಎಸ್ಓಸಿಯೇಶನ್, ಟೆಂಪಲ್ ಟೌನ್, ಮಿಡ್ ಟೌನ್, ರೋಟರಿ ಕ್ಲಬ್, ಆಳ್ವಾಸ್ ನರ್ಸಿಂಗ್ ಕಾಲೇಜ್, ಲಯನ್ಸ್ ಕ್ಲಬ್ ,ಜೆಸಿಐ , ಇನ್ನರ್ ವೀಲ್, ರೋಟರ್ಯಾಕ್ಟ್ ಕ್ಲಬ್, ನಿಯೋ ಕ್ಲಬ್ ಗಳು ಭಾಗವಹಿಸಲಿದೆ.
ಮಂಗಳೂರಿನ ಎಜೆ ಆಸ್ಪತ್ರೆ ಸಿಬ್ಬಂದಿಗಳು ಸಹಕಾರವನ್ನು ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ನ ಸದಾನಂದ ನಾಯಕ್ ಅವರು ತಿಳಿಸಿದ್ದಾರೆ.

ಕೋವಿಡ್ ಮ್ಯಾಕ್ಸಿನ್ ಸುಮಾರು 3 ಕೋಟಿ ಜನ ಪಡೆದಿದ್ದರೂ ಅದರಿಂದ ಯಾರಿಗೂ ಹೃದಯ ಸಂಬಂಧಿ ತೊಂದರೆಯಾಗಿರುವುದಿಲ್ಲ ಅದೆಲ್ಲವೂ ಕೂಡ ಒಪ್ಪತಕ್ಕ ಮಾತಲ್ಲ ಎಂದು ಹಲವಾರು ಉದಾಹರಣೆಗಳೊಂದಿಗೆ ತಿಳಿಸಿದರು.

ಸೆಪ್ಟಂಬರ್ 26ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಡಾಕ್ಟರ್ಸ ಅಸೋಸಿಯೇಷನ್ ನ ಅಧ್ಯಕ್ಷ ಡಾಕ್ಟರ್ ಮಹಾವೀರ ಜೈನ್ ಮಾತನಾಡಿ ಕನ್ನಡ ಭವನದಲ್ಲಿ ಮುಕ್ತಾಯಗೊಳ್ಳುವ ವಾಕಥಾನ್ ಕಾರ್ಯಕ್ರಮದ ತರುವಾಯ ಸಭಾ ಕಾರ್ಯಕ್ರಮ ನಡೆಯಲಿದೆ. ಮೂಡುಬಿದರೆಯ ಹೋಮ್ ಗಾರ್ಡ್ಸ್, ಪೊಲೀಸ್, ಹಾಗೂ ಇತರರಿಗೆ ಹೃದಯ ಸಂಬಂಧಿ ಕಾಯಿಲೆಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು. ಜೀವನಶೈಲಿಯನ್ನು ಬದಲಾಯಿಸುವುದರಿಂದ ಹೇಗೆ ಹೃದಯಘಾತದಿಂದ ಬದುಕುಳಿಯಬಹುದು ಎನ್ನುವಂತಹ ಎಲ್ಲ ಮಾಹಿತಿಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಕಾರ್ಯದರ್ಶಿ ಹರೀಶ್ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top