ಮೂಡುಬಿದಿರೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಷಷ್ಠಿ ಪೂರ್ತಿ ಸಂಭ್ರಮಾಚರಣೆ
ಮೂಡುಬಿದಿರೆ : ೧೯೬೪ ನೇ ಇಸೆವಿಯ ಶ್ರೀ ಕೃಷ್ಣ ಜನ್ಮಷ್ಟಮಿಯಂದು ಮಹಾರಾಷ್ಟ್ರದ ಸಾಂದೀಪನೀ ಆಶ್ರಮದಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಸರ ಸಂಘ ಚಾಲಕ ಗುರೂಜಿಯವ ಮಾರ್ಗದರ್ಶನದಿಂದ ಪೇಜಾವರ ಮಠಾಧೀಶರ ಉಪಸ್ಥಿತಿಯಲ್ಲಿ ಸ್ಥಾಪಿಸಲ್ಪದ್ದ ವಿಶ್ವಹಿಂದು ಪರಿಷತ್ ಇದೀಗ ಷಷ್ಠಿಪೂರ್ತಿ ಸಂಭ್ರಮದಲ್ಲಿದೆ ಎಂದು
ವಿ. ಎಚ್ ಪಿ ಕಾರ್ಯಧ್ಯಕ್ಷ ಶ್ಯಾಮ ಹೆಗ್ಡೆ ತಿಳಿಸಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಆಯೋಜಿದಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,
ಸಮಸ್ತ ಹಿಂದೂ ಸಮಾಜದ ಅಸಮಾನತೆಯ ಭಾವನೆನ್ನು ತೊಲಗಿಸಿ ನಾವೆಲ್ಲ ಹಿಂದು ನಾವೆಲ್ಲ ಬಂಧು ನಾವೆಲ್ಲ ಒಂದು ಎಂಬ ಹರಿಕಲ್ಪನೆ ಮೂಡಿಸಿ ವಿಶ್ವದಲ್ಲೆಡೆ ಸನಾತನ ಧರ್ಮದ ಹಿರಿಮೆಯನ್ನು ಪಸರಿಸಿ ಸಂರಕ್ಷಣೆಯನ್ನು ಮಾಡಿ ನಿರಂತರ ಸೇವೆ ಸಲ್ಲಿಸುತ್ತಿದೆ.
ವಿಶ್ವಹಿಂದು ಸ್ಥಾಪನಾದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಕಾರ್ಯಕ್ರಮವು ೩೧.೦೮.೨೦೨೪ ನೇ ಶನಿವಾರ ಸಂಜೆ ೭.೩೦ ಕ್ಕೆ ಮೂಡುಬಿದಿರೆ ಕನ್ನಡಭವನದಲ್ಲಿ ಜರುಗಲಿದೆ.
ವಿಶ್ವಹಿಂದು ಪರಿಷತ್ನ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷರಾದ ವಿಶ್ವನಾಥ ಪ್ರಭುಗಳ ಸಭಾಧ್ಯಕ್ಷತೆಯಲ್ಲಿ ಜೈನಮಠದ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ವಿಶ್ವಹಿಂದು ಪರಿಷತ್ನ ದಕ್ಷಿಣಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ರವರು ಬೌದ್ಧಿಕ ನೀಡಲಿದ್ದಾರೆ.
ಡಾ ಮೋಹನ್ ಆಳ್ವ, ದೇವಿಪ್ರಸಾದ್ ಶೆಟ್ಟಿ, ಶ್ಯಾಮ ಹೆಗ್ಡೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದರು.
ಉಪಾಧ್ಯಕ್ಷರು ಶಾಂತರಾಮ ಕುಡ್ವ, ಪ್ರಧಾನ ಕಾರ್ಯದರ್ಶಿ ಸುಚೇತನ ಜೈನ್ , ಸೇವಾ ಪ್ರಮುಖ್ ಶೇಖರ ಪುತ್ತಿಗೆ ಉಪಸ್ಥಿತರಿದ್ದರು.

































