ಮೂಡುಬಿದಿರೆಯಲ್ಲಿ ಪ್ರಪ್ರಥಮ ಕಾನೂನು ವಿದ್ಯಾಲಯ

Picture of RB NEWS

RB NEWS

Bureau Report

ಮೂಡುಬಿದಿರೆ: ಇಲ್ಲಿಗೆ ಸಮೀಪದ ಶಿರ್ತಾಡಿ ಯಲ್ಲಿರುವ ಭುವನ ಜ್ಯೋತಿ ವಿದ್ಯಾ ಸಮುಚ್ಚಯದಲ್ಲಿ ಮೂಡುಬಿದಿರೆಯಲ್ಲಿಯೇ ಪ್ರಥಮ ಕಾನೂನು ವಿದ್ಯಾಲಯ ಪ್ರಾರಂಭವಾಗುತ್ತಿದೆ.

ಅ. 10ರಂದು ದೇಶದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಪ್ರಸ್ತುತ ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ ಬೆಳುವಾಯಿ ಎಸ್ ಅಬ್ದುಲ್ ನಜೀರ್ ಅವರು ಉದ್ಘಾಟಿಸಲಿದ್ದಾರೆ.

ಈಗಾಗಲೇ 25 ಮಂದಿ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿ ಹಾಗೂ ಭಾರತೀಯ ಕಾನೂನು ಬಾರ್ ಕೌನ್ಸಿಲ್, ನವದೆಹಲಿ ಗಳಿಂದ ಒಪ್ಪಿಗೆ ಪಡೆಯಲ್ಪಟ್ಟ 5 ವರ್ಷದ ಬಿ ಬಿ ಎ ಎಲ್ ಎಲ್ ಬಿ ಪದವಿ ಪ್ರಸ್ತುತ ಪ್ರಾರಂಭವಾಗಲಿದೆ.

ಪಿಯುಸಿಯಲ್ಲಿ 45 ಶೇಕಡಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ನೇರವಾಗಿ ಈ ಪದವಿ ಕೋರ್ಸಿಗೆ ಸೇರಬಹುದಾಗಿರುತ್ತದೆ ಎಂದು ಭುವನ ಜ್ಯೋತಿ ಕಾನೂನು ವಿದ್ಯಾಲಯದ ಪ್ರಾಂಶುಪಾಲ ಪ್ರದೀಪ್ ಎಂ ಡಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರಕಾರದ ರೋಸ್ಟರ್ ನಿಯಮದ ಪ್ರಕಾರವೇ ವಿದ್ಯಾಲಯ ನಡೆಯುತ್ತಿದ್ದು ಹಿಂದುಳಿದ ವಸತಿ ನಿಲಯದ ಮೂರು ಮಂದಿ ವಿದ್ಯಾರ್ಥಿಗಳು ಹಾಗೂ ಎಸ್ ಸಿ ಎಸ್ ಟಿ ವಸತಿ ನಿಲಯದ ಇಬ್ಬರು ವಿದ್ಯಾರ್ಥಿಗಳು ಈಗಾಗಲೇ ಸೇರ್ಪಡೆಯಾಗಿದ್ದು ವಿದ್ಯಾರ್ಥಿಗಳಿಗೆ ಬೇಕಾದ ಈ ಪುಸ್ತಕ, ಈ ಜರ್ನಲ್ಸ್, ವಿಶೇಷ ಕಲಿಕೆಯ ರಿಸರ್ಚ್ ಪುಸ್ತಕಗಳು ಲಭ್ಯವಿದ್ದು ಸಾಕಷ್ಟು ಪುಸ್ತಕಗಳನ್ನು ಲೈಬ್ರೆರಿಯಲ್ಲಿ ಸಂಗ್ರಹಿಸಲಾಗಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅಗತ್ಯವಿರುವ ಮೂಟ್ ಕೋರ್ಟ್ ಕೂಡ ಸ್ಥಾಪಿಸಲಾಗುತ್ತಿದ್ದು ಶೈಕ್ಷಣಿಕ ಉನ್ನತಿಗೆ ಬೇಕಾದ ಎಲ್ಲವೂ ಲಭ್ಯವಾಗಲಿದೆ ಎಂದು ಭುವನ ಜ್ಯೋತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಆ‌ರ್ ಪ್ರಶಾಂತ್ ಡಿ ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾಲಯದ ಅಧ್ಯಕ್ಷ ರಾಘವೇಂದ್ರ ಪ್ರಭು ಮಾತನಾಡಿ ಮೂರು ವರ್ಷದ ಪದವಿಯೋತ್ತರ ಕಾನೂನು ಪದವಿಗೆ ಒಪ್ಪಿಗೆ ದೊರಕುವ ಸಾಧ್ಯತೆ ಇದ್ದು ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಸಂಸ್ಥೆಯ ಸಂಚಾಲಕ ಪ್ರಶಾಂತ್ ಎನ್, ಖಜಾಂಚಿ ಲತಾ ಎ, ಹಾಜರಿದ್ದರು.

ಫೋಟೋ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top