ಮೂಡುಬಿದಿರೆಯಲ್ಲಿ ನಾಡಪ್ರಭು ಕೆಂಪೇಗೌಡ

ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ 76 ನೇ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಸ್ತಬ್ಧ ಚಿತ್ರ ರಚಿಸಲು ಯೋಚಿಸಲಾಯ್ತು. ಆದರೆ ಹೇಗೆ, ಏನು ಎಂಬ ಪ್ರಶ್ನೆ ಮೂಡಿತು. ಆಗ ಸ್ತಬ್ಧ ಚಿತ್ರದ ಸಂಪೂರ್ಣ ರೂಪುರೇಷೆ ತಯಾರಿಸುವಲ್ಲಿ ಮುತುವರ್ಜಿ ವಹಿಸಿದವರು ಪಡುಮಾರ್ನಾಡು ಗ್ರಾಮ ಪಂಚಾಯತ್ ಕಚೇರಿಯ ಉದ್ಯೋಗಿ ಬಸವನಕಜೆಯ ಕಿಶೋರ್ ಕುಮಾರ್ . ಸ್ತಬ್ಧ ಚಿತ್ರ ರೂಪಿಸಿದ್ದು ಮಾತ್ರವಲ್ಲ ಸ್ವತಃ ತಾನೇ ನಾಡಪ್ರಭು ಕೆಂಪೇಗೌಡರಂತೆ ಪೋಷಾಕು ಧರಿಸಿ ನೈಜತೆ ಮೆರೆದರು. ನೆರೆದವರೆಲ್ಲರೂ, ಪ್ರತಿಮೆಯಂತಿದ್ದುದು ಇಳಿದು ಬರುತ್ತಿರುವುದನ್ನು ನೋಡಿ ಒಮ್ಮೆ ಅವಾಕ್ಕಾದರು.






































