ಮೂಡುಬಿದಿರೆಯಲ್ಲಿ ಡಾ.ನಾ.ಮೊಗಸಾಲೆ ಅಭಿನಂದನಾ ಸಮಾರಂಭ

Picture of RB NEWS

RB NEWS

Bureau Report

ಮೂಡುಬಿದಿರೆ: ಹಿರಿಯ ಸಾಹಿತಿ, ಕಾಂತಾವರ ಕನ್ನಡ ಸಂಘದ ಮೂಲ ಪ್ರೇರಕ ಡಾ.ನಾ. ಮೊಗಸಾಲೆ ಇವರ 80ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿನಂದನಾ ಸಮಾರಂಭ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸೆಪ್ಟೆಂಬರ್ 21ರಂದು ಜರಗಲಿರುವುದು.‌

ಸಮಾಜ ಮಂದಿರ ಸಭಾ, ಆಳ್ವಾಸ್ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಮೊಗಸಾಲೆಯವರ ಕೃತಿಗಳ ಬಗ್ಗೆ ವಿಮರ್ಶೆಯ ಕಾರ್ಯಕ್ರಮವು ಇದ್ದು ಸಂಪಾದಿಸಿದ ಕೃತಿಗಳ ಪರಮರ್ಶೆಯು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top