ಮೂಡುಬಿದಿರೆಯಲ್ಲಿ ಕಲ್ಲಡ್ಕ

Picture of RB NEWS

RB NEWS

Bureau Report

ಮೂಡುಬಿದಿರೆ : ಕಲ್ಲಡ್ಕ ಟೀ ಅಥವಾ ಕೇಟಿ ಹೆಸರು ಮಾತ್ರ ಬಹುಜನರಿಗೆ ಗೊತ್ತಷ್ಟೆ ಹೊರತು ಅದರ ಮಾಲಿಕನ ಬಗ್ಯೆ ಗೊತ್ತು ಕಡಿಮೆ.
ಕಲ್ಲಡ್ಕ ಟೀ ಅಂಗಡಿಯ ಮಾಲೀಕ ರಾಘವೇಂದ್ರ ಎನ್. ಹೊಳ್ಳರನ್ನು ಅಭಿನಂದಿಸಿ ಸನ್ಮಾನಿಸುವ ಆತ್ಮೀಯ ಕಾರ್ಯಕ್ರಮವನ್ನು ಮೂಡುಬಿದಿರೆಯಲ್ಲಿ ಏರ್ಪಡಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಲ್ಲಡ್ಕದ ಕೇಟಿ ಚಹದಂಗಡಿಯ ಮಾಲಿಕರ ಪರಿಚಯವನ್ನು ಕೂಡ ಪರಿಚಯಿಸಿದಂತಾಗಿದೆ. ರೆಹ್ಮಾನಿಯ ಹೊಟೇಲ್ ನವರು ಹೊಸದಾಗಿ ಪ್ರಾರಂಭಿಸಿದ “ಬೆದ್ರ ಕೆಫೆ” ಅದರ ಉದ್ಘಾಟನಾ ಸಮಾರಂಭದಲ್ಲಿ ಈ ಒಂದು ಒಳ್ಳೆಯ ಕಾರ್ಯಕ್ರಮವನ್ನು ನೀಡಿರುವುದು ಶ್ಲಾಘನೀಯ.

ಮೂಡುಬಿದಿರೆಯ ರಾಜೀವ ಗಾಂಧಿ ವಾಣಿಜ್ಯ ಕಟ್ಟಡದಲ್ಲಿ ಬೆದ್ರ ಕೆಫೆಯ ಉದ್ಘಾಟನೆ ಇಂದು ನಡೆಯಿತು. 1939ರಿಂದಲೇ ಮನೆಯೂಟದ ಹೊಟೇಲಿನಂತೆ ಆರಂಭಗೊಂಡ ರೆಹಮಾನಿಯ ಹೊಟೇಲ್ ಮಾಲಕ ಸಹೋದರರೆ ಪ್ರಾರಂಭಿಸಿರುವ ಈ ಹೊಟೇಲ್ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಮಾಡಿದರು. ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ಇಂದು,ಪುರಸಭಾಧ್ಯಕ್ಷೆ ಶಕುಂತಳ ದೇವಾಡಿಗ,ಉಪಾಧ್ಯಕ್ಷ ನಾಗರಾಜ ಪೂಜಾರಿ,ಮೂಡುಬಿದಿರೆ ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಉದ್ಯಮಿಗಳಾಗಿರುವ ಸಿ ಹೆಚ್ ಗಫೂರ್ ಮತ್ತು ಅಬುಲಾಲ್ , ಆಲಂಗಾರಿನ ಆಸ್ಪತ್ರೆಯ ವೈದ್ಯ ಡಾ. ವಿನಯಪ್ರಸಾದ್ ಇನ್ನಿತರರು ವೇದಿಕೆಯಲ್ಲಿ ಅತಿಥಿಗಳಾಗಿದ್ದರು.
-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top