ಮೂಡುಬಿದಿರೆಗೆ ಭಕ್ತಿ ರಥ ಯಾತ್ರೆ
ಮೂಡುಬಿದಿರೆಗೆ ಏಪ್ರಿಲ್ 4 ರಂದು ಭಕ್ತಿ ಸಿದ್ಧಾಂತ ಉತ್ಸವ -ರಾಮೋತ್ಸವ ಪ್ರಯುಕ್ತ ಹೊರಟ ಭಕ್ತಿ ರಥ ಯಾತ್ರೆ ಆಗಮಿಸಿತು. ಅಖಿಲ ಭಾರತ ಮಾಧ್ವ ಮಹಾ ಮಂಡಲ ಹಾಗೂ ಪೂರ್ಣ ಪ್ರಜ್ಞಾ ವಿದ್ಯಾ ಪೀಠದ ಸಂಯುಕ್ತ ಆಶ್ರಯದಲ್ಲಿ ಹೊರಟ ಈ ರಥ ಎಲ್ಲ ಕಡೆ ಸಂಚರಿಸಲಿದೆ. ಮೂಡುಬಿದಿರೆಗೆ ರಥ ಆಗಮಿಸಿದ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ದ.ಕ.ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಎಂ, ಎಂ ಸಿ ಎಸ್ ಬ್ಯಾಂಕ್ ನ ಚಂದ್ರಶೇಖರ, ಉದ್ಯಮಿ ಶ್ರೀಪತಿ ಭಟ್, ಪುರಸಭೆ ಅಧ್ಯಕ್ಷ ಜಯಶ್ರೀ, ವಿಶ್ವ ಹಿಂದು ಪರಿಷತ್ ನ ಮುಂದಾಳುಗಳು, ಪುರಸಭಾ ಸದಸ್ಯರುಗಳು, ಸಾವಿರಾರು ನಾಗರಿಕರು ಹಾಜರಿದ್ದು ಸ್ವಾಗತಿಸಿದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ

































