ಮೂಡುಬಿದಿರೆ:ಗಾಂಧಿ ನಡಿಗೆ ಸ್ವಚ್ಛತೆ ಕಡೆಗೆ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಕಾಂಗ್ರೆಸ್ ಕ್ಷೇತ್ರ ಸಮಿತಿಯ ವತಿಯಿಂದ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಸಮಾಜ ಮಂದಿರ ಕಡೆಗೆ ಗಾಂಧಿ ನಡಿಗೆ ಸ್ವಚ್ಛತೆ ಎಡೆಗೆ ಕಾರ್ಯಕ್ರಮ ನಡೆಯಿತು.


ಜಾಥಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ಅಭಯ ಚಂದ್ರ ಜೈನ್, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿಮಿಥುನ್ ರೈ ಚಾಲನೆಯನ್ನು ನೀಡಿ ನೇತೃತ್ವ ವಹಿಸಿದ್ದರು.
ಎಲ್ಲರ ಕಣ್ಮಣಿಯಾಗಿದ್ದ ಬಾಪೂಜಿ ಭಾರತವನ್ನು ಏಕತಾ ಸೂತ್ರದಲ್ಲಿ ಒಗ್ಗೂಡಿಸಿದವರು. ಕ್ರಾಂತಿಯ ಕಹಳೆಗೆ ಶಾಂತಿಯ ಮಂತ್ರವನ್ನು ಒಗ್ಗಿಸಿದವರು ಅಂತಹ ಗಾಂಧೀಜಿ ಹಾಗೂ ಶಾಸ್ತ್ರಿಯವರನ್ನು ನಾವು ಸದಾ ಕಾಲ ನೆನಪಿಸಿಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಿಥುನ್ ರೈ ಹೇಳಿದರು.
ರಾಷ್ಟ್ರಪಿತ ಬಾಪು ರವರ ಉತ್ತಮ ಆದರ್ಶ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಹೇಳಿದರು.

ಅಭಯಚಂದ್ರ ಮಾಜಿ ಸಚಿವರು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಕೆಪಿಸಿಸಿ ಸದಸ್ಯರು ವಸಂತ್ ಬೆರ್ನಾಡ್, ಚಂದ್ರಹಾಸ ಸನಿಲ್, ಪದ್ಮಪ್ರಸಾದ್, ಹರ್ಷವರ್ಧನ್ ಪಡಿವಾಲ್, ಪುರಂದರ ದೇವಾಡಿಗ, ಜಯಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರು, ಸಮಿತಿ ಅಧ್ಯಕ್ಷರು ಸದಸ್ಯರು, ಭಾಗವಹಿಸಿದ್ದರು.
ವಲೇರಿಯನ್ ಸ್ವಾಗತಿಸಿದರು. ಮೋಹನ್ ಕೋಟ್ಯಾನ್ ಧನ್ಯವಾದಗಳನ್ನು ನೀಡಿದರು,

































