ಮೂಡಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಪೊಲೀಸರ ಕಾರ್ಯಚರಣೆ: ಕುಖ್ಯಾತಿ ಆರೋಪಿಗಳಿಬ್ಬರ ಬಂಧನ

Picture of RB NEWS

RB NEWS

Bureau Report

ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024 ಆಗಸ್ಟ್ 15 ರಂದು ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ ನಿರ್ಮಾಲ ಪಂಡಿತ್(70) ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರವನ್ನು ಹಾಗೂ 2024 ಸೆ. 02 ರಂದು ಮೂಡಬಿದ್ರೆ ತಾಲೂಕು ಮೂಡು ಮಾರ್ನಾಡು ಗ್ರಾಮದ ಬಸದಿ ಬಳಿ ಪ್ರೇಮಾ ( 82) ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್ ಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದುಕೊಂಡು ಹೋಗಿದ್ದರು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಗ್ಗೆ ತನಿಖೆ ನಡೆದಿದ ಮೂಡುಬಿದಿರೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳು ಪ್ರಕರಣಗಳ ಕೃತ್ಯಕ್ಕೆ ಬಳಸಿದ TVS Jupiter ಸ್ಕೂಟರ್ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಕಳವು ಆಗಿರುವ ಸ್ಕೂಟರ್ ಆಗಿರುತ್ತದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ. 2,50,000 ಆಗಿರುತ್ತದೆ.

ಪ್ರಕರಣದಲ್ಲಿ, ದಸ್ತಗಿರಿಯಾಗಿರುವ 1 ನೇ ಆರೋಪಿ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ ವಿರುದ್ಧ ಈ ವರೆಗೆ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ.

ಪ್ರಸ್ತುತ ಈತನು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ದಸ್ತಗಿರಿ ವಾರೆಂಟ್, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 5 ದಸ್ತಗಿರಿ ವಾರೆಂಟ್, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಕೋಣಾಜೆ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್, ಬಟ್ಟೆ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್ ಗಳಿದ್ದು, ಒಟ್ಟು 15 ದಸ್ತಗಿರಿ ವಾರೆಂಟ್ ನ್ಯಾಯಾಲಯವು ಹೊರಡಿಸಿದೆ.

ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಂತೆ, ಡಿಸಿಪಿ ಯವರಾದ ಸಿದ್ಧಾರ್ಥ ಗೊಯಲ್ (ಕಾ&ಸು), ದಿನೇಶ್ ಕುಮಾರ್ ಡಿಸಿಪಿ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ ಈ ಕಾರ್ಯಚರಣೆಯಲ್ಲಿ

ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಪ್ರಶಾಂತ್ ಎ.ಎಸ್.ಐ, ಮೋಹನ್ ದಾಸ್ ಕೋಟ್ಯಾನ್ ಎ.ಎಸ್.ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್ , ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

ಕಳವು ಆಗಿರುವ ಚಿನ್ನಾಭರಣ ಮೌಲ್ಯ ರೂ. 3,10,000 ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣದ ಮೌಲ್ಯ ರೂ. 2,60,000

  1. ಮಂಗಳೂರು ಬಜೈ ಪೊಲೀಸ್ ಠಾಣೆ ಮೊ.ಸಂ.185/2010 ಕಲಂ 395 ಭಾದಸಂ
  2. ಮಂಗಳೂರು ಬಟ್ಟೆ ಪೊಲೀಸ್ ಠಾಣೆ ಮೊ.ಸಂ.124/2018 ಕಲಂ 392 411 ಭಾದಸಂ
  3. ಮಂಗಳೂರು ಬಪ್ಪೆ ಪೊಲೀಸ್ ಠಾಣೆ ಮೊ.ಸಂ.24/2017 ಕಲಂ 392 ಭಾದಸಂ
  4. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.231/2010 ಕಲಂ 379 ಭಾದಸಂ
  5. ಉಳ್ಳಾಲ ಪೊಲೀಸ್ ಠಾಣೆ 353/2014 800 457, 380 ಭಾದಸಂ
  6. ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.42/2015 ಕಲಂ 379 ಭಾದಸಂ.
  7. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.10/2015 ಕಲಂ 379 ಭಾದಸಂ
  8. ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.17/2015 ಕಲಂ 379 ಭಾದಸಂ
  9. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.192/2015 ಕಲಂ 401, 379 ಭಾದಸಂ
  10. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.116/2016 ಕಲಂ 457, 380 ಜೊತೆಗೆ 34 ಭಾದಸಂ.
  11. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.353/2014 ಕಲಂ 457, 380 ಭಾದಸಂ.
  12. ಮಂಗಳೂರು ಉಳ್ಳಾಲ ಪೊಲೀಸ್ ಠಾಣೆ ಮೊ.ಸಂ.188/2017 ಕಲಂ 402, 399 ಭಾದಸಂ
  13. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.298/2014 ಕಲಂ 379 ಭಾದಸಂ
  14. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.106/2020 ಕಲಂ 392 ಭಾದಸಂ
  15. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.88/2017 ಕಲಂ 399 ಭಾದಸಂ
  16. ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ.121/2017 ಕಲಂ 457, 380 ಭಾದಸಂ
  17. ಮಂಗಳೂರು ಬರ್ಕೆ ಪೊಲೀಸ್ ಠಾಣೆ ಮೊ.ಸಂ.93/2015 ಕಲಂ 302 ಭಾದಸಂ
  18. ಮಂಗಳೂರು ಮೂಲ್ಕಿ ಪೊಲೀಸ್ ಠಾಣೆ ಮೊ.ಸಂ.124/2018 ಕೋಡ್ 457,380 ಭಾದಸಂ
  19. ಮಂಗಳೂರು ಮೂಲ್ಕಿ ಪೊಲೀಸ್ ಠಾಣೆ ಮೊ.ಸಂ.101/2020 ಕಲಂ 392 ಭಾದಸಂ
  20. ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ಮೊ.ಸಂ.26/2015 ಕಲಂ 457, 380 ಭಾದಸಂ
  21. ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ಮೊ.ಸಂ.121/2017 ಕಲಂ 457, 380 ಭಾದಸಂ
  22. ಮಂಗಳೂರು ಕೊಣಾಜೆ ಪೊಲೀಸ್ ಠಾಣೆ ಮೊ.ಸಂ.251/2017 ಕಲಂ 392 ಜೊತೆಗೆ 34 ಬಡಸಂ
  23. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ.145/2013 ಕಲಂ 379 ಭಾದಸಂ.
  24. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ.155/2013 ಕಲಂ 379 ಭಾದಸಂ.
  25. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ.72/2015 ಕಲಂ 392 ಭಾದಸಂ.
  26. ಮಣಿಪಾಲ ಪೊಲೀಸ್ ಠಾಣೆ ಮೊ.ಸಂ. 164/2017 ಕೋಡ್ 392,414, ಭಾದಸಂ
  27. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.97/2017 ಕಲಂ 392 ಜೊತೆಗೆ 34 ಭದನಂ.
  28. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.99/2018 ಕಲಂ 392 ಭಾದಸಂ.
  29. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.95/2019 ಕಲಂ 392 ಜೊತೆಗೆ 34 ಭಾದಸಂ.
  30. ಮಲ್ಪೆ ಪೊಲೀಸ್ ಠಾಣೆ ಮೊ no 58/2019 00 394, 397,414, ở 34 ಭಾದಸಂ
  31. ಮಲ್ಪೆ ಪೊಲೀಸ್ ಠಾಣೆ ಮೊ.ಸಂ.73/2017 ಕಲಂ 394, ಜೊತೆಗೆ 34 ಭಾದಸಂ.
  32. ಶಿರ್ವಾ ಪೊಲೀಸ್ ಠಾಣೆ ಮೊ.ಸಂ. 48/2018 ಕಲಂ 392, ಜೊತೆಗೆ 34 ಭಾದಸಂ
  33. ಮೂಡುಬಿದಿರೆ ಪೊಲೀಸ್ ಠಾಣೆ ಮೊ.ಸಂ.298/2018 ಕಲಂ 392 ಭಾದಸಂ
  34. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮೊ.ಸಂ.271/2014 ಕಲಂ 394 ಭಾದಸಂ
  35. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮೊ.ಸಂ.151/2014 ಕಲಂ 379 ಭಾದಸಂ
  36. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.246/2015 ಕಲಂ 379 ಭಾದಸಂ
  37. ಮಂಗಳೂರು ಉತ್ತರ ಪೊಲೀಸ್ ಠಾಣೆ ಮೊ.ಸಂ.94/2020 ಕಲಂ 379 ಭಾದಸಂ
  38. ಮಂಗಳೂರು ಉತ್ತರ ಪೊಲೀಸ್ ಠಾಣೆ ಮೊ.ಸಂ.95/2020 ಕಲಂ 379 ಭಾದಸಂ.
  39. ಕಾರ್ಕಳ ನಗರ ಪೊಲೀಸ್ ಠಾಣೆ ಮೊ ನಂ.119/2019 ಕಲಂ 392 ಜೊತೆಗೆ 34 ಭಾದಸಂ
  40. ಉಡುಪಿ ನಗರ ಪೊಲೀಸ್ ಠಾಣೆ ಮೊ. 31/2015 ಕಲಂ 307 ಜೊತೆಗೆ 34 ಭಾದಸಂ
  41. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 57/2023 ಕಲಂ 394 ಭಾದಸಂ
  42. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 75/2023 ಕಲಂ 379 ಭಾದಸಂ
  43. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 148/2024 ಕಲಂ 304 ಬಿ.ಎನ್.ಎಸ್
  44. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 165/2024 ಕಲಂ 304 ಬಿ.ಎನ್.ಎಸ್

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top