ಮುಲ್ಕಿ ಮೂಡುಬಿದಿರೆ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಆದ್ಯಂತ ಮಾನವ ಸರಪಳಿ ರಚನೆ

Picture of RB NEWS

RB NEWS

Bureau Report

ರಾಜ್ಯದಾದ್ಯಂತ ಸೆಪ್ಟೆಂಬರ್ 15ರಂದು ನಡೆಯುವ ಮಾನವ ಸಲುಪಳಿ ರಚನೆ ಸಂಬಂಧ ಸೆ. 11ರಂದು ಮೂಡುಬಿದಿರೆ ಮುಲ್ಕಿ ಕ್ಷೇತ್ರದ ಎಲ್ಲಾ ಅಧಿಕಾರಿಗಳ ಸಭೆ ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಎಲ್ಲ ಅಧಿಕಾರಿಗಳ, ಶಿಕ್ಷಣ ಸಂಸ್ಥೆಗಳವರ ಸಹಕಾರವನ್ನು ಯಾಚಿಸಿದರು. ಸ್ವಾತಂತ್ರ್ಯ, ಸಮಾನತೆ, ಮತ್ತು ಭಾತೃತ್ವದ ಜೀವಾಳವಾಗಿರುವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮುಲ್ಕಿ ಮೂಡುಬಿದಿರೆ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಯ ಪ್ರಾರಂಭ ಸ್ಥಾನವಾದ ಹೆಜಮಾಡಿ ಪ್ರದೇಶದಿಂದ ಪ್ರಾರಂಭವಾಗಿ ಪಾವಂಜೆ ಸೇತುವೆ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕಾರಿಗಳು, ಎನ್.ಸಿ.ಸಿ., ಎನ್ ಎಸ್ ಎಸ್ , ಸ್ಕೌಟ್ಸ್, ಗೈಡ್ಸ್, ಸೇವಾ ಸಂಸ್ಥೆಯ ಸದಸ್ಯರುಗಳು ಸೇರಿ ಮಾನವ ಸರಪಳಿ ರಚಿಸಲು ನಿರ್ಧರಿಸಲಾಯಿತು.

ಬೆಳಿಗ್ಗೆ ಗಂ.9 ರಿಂದ ಗಂ.10.30 ರ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರಿಗೆ ಮಾಲಾರ್ಪಣೆ, ಸಂವಿಧಾನ ಪೀಠಿಕೆಯ ಓದುವಿಕೆ, ಶಾಸಕರಿಂದ ನಡೆಯಲಿದೆ.

ತರುವಾಯ ಗಿಡ ನೆಡುವ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ, ಸಮಾಜ ಕಲ್ಯಾಣ ಅಧಿಕಾರಿ ಸುರೇಶ ಅಡಿಗ, ಧಾರ್ಮಿಕ ದತ್ತಿ ಇಲಾಖೆಯ ಗೋವಿಂದ ನಾಯಕ್, ಕಿರಣ್, ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ ಹಾಜರಿದ್ದರು. ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಎಲ್ಲಾ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top