- ಎಪ್ರಿಲ್ ೨೦ – ೨೩ ರಿಂದ
- ಮುದ್ರಾಡಿ : ಆದಿಮುಧ್ರೋತ್ಸವ.
- ವರ್ಧಂತಿ ಉತ್ಸವ – ೫೧ನೇ ವರ್ಷದ ನೇಮೋತ್ಸವ
ಮುದ್ರಾಡಿ : ಅಭಯಹಸ್ತೆ ಆದಿಶಕ್ತಿ ಶ್ರೀಕ್ಷೇತ್ರ ಮುದ್ರಾಡಿ, ನಂದಿಕೇಶ್ವರ ದೇವಸ್ಥಾನ, ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು ಧರ್ಮದೈವಗಳು ಇದರ ಆದಿಮುಧ್ರೋತ್ಸವ ವರ್ಧಂತಿ ಉತ್ಸವ ಹಾಗೂ ೫೧ನೇ ವರ್ಷದ ನೇಮೋತ್ಸವವು ಇದೇ ೨೦ರಿಂದ ೨೩ರ ತನಕ ಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್ ಮೋಹನ್ ಸಂಕಲ್ಪದಂತೆ ಚಿಕ್ಕಮಗಳೂರಿನ ಬ್ರಹ್ಮರ್ಷಿ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಮಾರ್ಗದರ್ಶನದಂತೆ ನಡೆಯಲಿದೆ.
ಎಪ್ರಿಲ್ ೨೦ರಂದು ಗ್ರಾಮದೇವರ ಪ್ರಾರ್ಥನೆ ತೋರಣ ಮುಹೂರ್ತದೊಂದಿಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಸಂಜೆ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ ನೇಮ, ಬ್ರಹ್ಮಬೈದರ್ಕಳಿಗೆ ಅಗೆಲು ಸೇವೆ ದರ್ಶನ ನಡೆಯಲಿದೆ. ೨೧ರಂದು ಬ್ರಹ್ಮಬೈದರ್ಕಳ ನೇಮ, ಮಾಯಂದಾಲ ನೇಮ, ಕೋಟಿಚೆನ್ನಯ ಮತ್ತು ಶ್ರೀದೇವಿ ದರ್ಶನ ಮುಖಾವಲಿ, ಮುಂಜಾನೆ ಜೋಗಿ ಪುರುಷ ನೇಮ ಹಾಗೂ ೨೨ ರಂದು ಸಂಜೆ ಧರ್ಮದೈವಗಳ ನೇಮ ಮತ್ತು ೨೩ರಂದು ಮುಂಜಾನೆ ಚಾಮುಂಡೇಶ್ವರಿ ಗುಳಿಗ ಕೋಲ ನಡೆಯಲಿದೆ ಎಂದು ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್ ಮೋಹನ್ ತಿಳಿಸಿದ್ದಾರೆ.



































