ಮುದ್ದುಕೃಷ್ಣ ವೇಷ ಸ್ಪರ್ಧೆ
ಮೂಡುಬಿದಿರೆ: ಸ್ಥಳೀಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನವರ ಪ್ರತಿವರ್ಷ ನಡೆಸುವ ಮುದ್ದು ಕೃಷ್ಣ ವೇಷ ಸ್ಪರ್ಧೆ ಈ ವರ್ಷ ಮೂಡುಬಿದರೆಯ ಸಮಾಜ ಮಂದಿರದಲ್ಲಿ ಆಗಸ್ಟ್ 11ರಂದು ಜರಗಲಿರುವುದು.
ಒಟ್ಟು ಐದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ವಿಭಾಗದಲ್ಲಿ ಒಂದರಿಂದ ಎರಡು ವರ್ಷ, ಎರಡನೇ ವಿಭಾಗ ಎರಡರಿಂದ ನಾಲ್ಕು ವರ್ಷ, ಮೂರನೇ ವಿಭಾಗ ನಾಲ್ಕರಿಂದ ಆರು ವರ್ಷ, ನಾಲ್ಕನೇ ವಿಭಾಗ ಆರರಿಂದ ಎಂಟು ವರ್ಷ, ಐದನೇ ವಿಭಾಗ ಎಂಟರಿಂದ ಹತ್ತು ವರ್ಷ ಪ್ರಾಯದ ಮಕ್ಕಳು ಭಾಗವಹಿಸಬಹುದಾಗಿದೆ.
ಪ್ರತಿ ಮಗುವಿಗೂ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದ್ದು ಧ್ವನಿ ಮುದ್ರಿತ ಹಿನ್ನೆಲೆ ಪಡೆಯಬಹುದಾಗಿದೆ.
ಪ್ರತಿಸ್ಪರ್ಧಿಗೂ ಟೋಕನ್ ನೀಡಲಾಗುವುದು. ಸ್ಪರ್ಧಿಸಿದ ಎಲ್ಲ ಪುಟಾಣಿಗಳಿಗೂ ಸ್ಪರ್ಧಾ ದಿನವೇ ಪದಕ ನೀಡಿ ಪುರಸ್ಕರಿಸಲಾಗುವುದು.
ಆಸಕ್ತರು ಬಿ ಸುರೇಶ್ ರಾವ್, ಚೈತ್ರ ಆರ್ಟ್ಸ್, ನಾಗರಕಟ್ಟೆ ರಸ್ತೆ ಫೋನ್ 9448812368, ರಾಜೇಶ್, ಬೆನಕ ಆರ್ಟ್ಸ್, ದಿವ್ಯ ಕಾಂಪ್ಲೆಕ್ಸ್ ಫೋನ್ 9945998412, ಕೋಸ್ಟಿಂ ಕೋಟೆ ಜ್, ಸೀಮಾ ಕಾಂಪ್ಲೆಕ್ಸ್, ಫೋನ್ 9916385773, ಸಂತೋಷ್ ಕುಮಾರ್, ದುರ್ಗಾ ಹೇರ್ ಡ್ರೆಸ್ಸಿಂಗ್, ಶಾಲಿಮಾರ್ ಕಾಂಪ್ಲೆಕ್ಸ್, ಫೋನ್ 9880237557 ಇವರನ್ನು ಅಗೋಸ್ಟ 9ಕ್ಕೆ ಮೊದಲು ಸಂಪರ್ಕಿಸಿ ನೋಂದಾಯಿಸಬೇಕು.





































