ಮುದ್ದುಕೃಷ್ಣ ವೇಷ ಸ್ಪರ್ಧೆ


ಮೂಡುಬಿದರೆ: ಸ್ಥಳೀಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನವರ 38ನೇ ವರ್ಷದ ಮೊಸರು ಕುಡಿಕೆ ಉತ್ಸವಕ್ಕೆ ಪೂರ್ವಭಾವಿಯಾಗಿ ನಡೆಸುವ ಮುದ್ದುಕೃಷ್ಣ ವೇಷ ಸ್ಪರ್ಧೆ ಸೆಪ್ಟೆಂಬರ್ 11ರಂದು ಸಮಾಜ ಮಂದಿರದಲ್ಲಿ ಜರುಗಿತು.
ಒಟ್ಟು ಐದು ವಿಭಾಗಗಳಲ್ಲಿ ನಡೆದ ಸ್ಪರ್ಧೆ ಮೊದಲ ವಿಭಾಗದಲ್ಲಿ ಒಂದರಿಂದ ಎರಡು ವರ್ಷದ ಮಕ್ಕಳು, ಎರಡನೇ ವಿಭಾಗದಲ್ಲಿ ಎರಡರಿಂದ ನಾಲ್ಕು ವರ್ಷದ ಮಕ್ಕಳು, ಮೂರನೇ ವಿಭಾಗದಲ್ಲಿ ನಾಲ್ಕರಿಂದ ಆರು ವರ್ಷದ ಮಕ್ಕಳು, ನಾಲ್ಕನೇ ವಿಭಾಗದಲ್ಲಿ ಆರರಿಂದ ಎಂಟು ವರ್ಷದ ಮಕ್ಕಳು, ಐದು ನೇ ವಿಭಾಗದಲ್ಲಿ ಎಂಟರಿಂದ ಹತ್ತು ವರ್ಷದ ಮಕ್ಕಳು ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೂ ಜನನ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿತ್ತು.
ಸ್ಪರ್ಧೆಯನ್ನು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ದೀಪ ಬೆಳಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರುಗಳಾದ ಉದ್ಯಮಿ ಶ್ರೀಪತಿ ಭಟ್, ಪ್ರಮೋದ್ ಕುಮಾರ್ ಬಿ ಗಣೇಶ್ ರಾವ್, ಅಧ್ಯಕ್ಷ ಸಂತೋಷ್ ಕುಮಾರ್, ಸಂಚಾಲಕ ಬಿ ಸುರೇಶ್ ರಾವ್, ಪ್ರಧಾನ ಕಾರ್ಯದರ್ಶಿ ಸುಶಾಂತ್ ಕರ್ಕೇರಾ, ಮಾರೂರು, ಕೋಶಾಧಿಕಾರಿ ಶಿವಾನಂದ ಶಾಂತಿ ಹಾಗೂ ಇತರರು ಉಪಸ್ಥಿತರಿದ್ದರು.





































