ಮುಡಾ ಕಚೇರಿಯಲ್ಲಿ ಲೋಕಾಯುಕ್ತ ತಂಡದಿಂದ ಮಹಾಭೇಟೆ; ಬಲೆಗೆ ಸಿಕ್ಕುಬಿದ್ದ ಕಮಿಷನರ್ : ರೂ.25 ಲಕ್ಷ ವಶಕ್ಕೆ

Picture of RB NEWS

RB NEWS

Bureau Report

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ 25 ಲಕ್ಷ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.

ಮುಡಾ ಕಮಿಷನರ್ ಮನ್ಸೂರ್‌ ಅಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಲಂಚ ಪಡೆಯುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆತನ ಜೊತೆಗಿದ್ದ ದಲ್ಲಾಳಿ ಸಲೀಂ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ.


ಮನೆಗೆ ಟಿಡಿಆರ್‌ ಅನುಮತಿ ನೀಡುವುದಕ್ಕಾಗಿ 25 ಲಕ್ಷ ಲಂಚಕ್ಕೆ ಕಮಿಷನರ್ ಬೇಡಿಕೆ ಇಟ್ಟಿದ್ದಾನೆ. ಕಮಿಷನರ್ ಡಿಮಾಂಡ್‌ ಮಾಡಿ ಹಲವು ದಿನಗಳಿಂದ ಒತ್ತಡ ಹಾಕಿ ದಲ್ಲಾಳಿ ಮೂಲಕ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಇನ್ನು ಲೋಕಾಯುಕ್ತ ಡಿವೈಎಸ್ ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಭ್ರಷ್ಟಾಚಾರದ ಕೂಪ ಮುಡಾ!


ಮಂಗಳೂರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಯಾ ಮುಡಾ ಕಚೇರಿ ಸ್ಥಾಪನೆಗೊಂಡ ಕಾಲಘಟ್ಟದಿಂದ ಪ್ರಸ್ತುತ ದಿನದ ವರೆಗೂ ಮಹಾ ಭ್ರಷ್ಟಾಚಾರ ತಾಂಡವವಾಡುವ ಕೇಂದ್ರವಾಗಿ ಬೆಳೆದು ನಿಂತಿದೆ.
ಪ್ರತಿದಿನ ಇದೇ ಕಚೇರಿಯಲ್ಲಿ ಮಹಾ ಜನಪ್ರತಿನಿಧಿಗಳು ಬೀಡುಬಿಟ್ಟರೂ ಅವರೆಲ್ಲರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಮಾತ್ರ ವಿಪರ್ಯಾಸ.
ಇದೇ ಕಚೇರಿಗೆ  ನೇರವಾಗಿ ಬರುವಂತಹ ಅರ್ಜಿದಾರರ ಪಾದರಕ್ಷೆ ಸವೆದು ಹೋದುದಕ್ಕಿಂತ ಕಚೇರಿಗೆ ಹಾಕಲಾದ ಹಾಸುಗಲ್ಲು ಸವೆದದೇ ಹೆಚ್ಚು.‌
ಅರ್ಜಿ ನೀಡಿ ಬೇಕಾಬಿಟ್ಟಿಯಾಗಿ ಅಲೆದಾಡುವಂತಹ ಪ್ರಸಂಗಗಳು ಅರ್ಜಿದಾರರದು ಆದರೆ, ಕಚೇರಿಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಮಾತ್ರ ಕಚೇರಿ ವೇಳಾವಧಿಯಲ್ಲಿ ಮೀಟಿಂಗ್ ಅಂತ ಅಧಿಕಾರಿಯ ರೂಮ್ ನಲ್ಲಿ ಕುಳಿತು ಬಿಡುತ್ತಾರೆ.
ಅಯುಕ್ತರ ಸಹಾಯಕನನ್ನು ವಿಚಾರಿಸಿದರೆ‌ ಸರ್ ಮೀಟಿಂಗ್ ನಲ್ಲಿ ಇದ್ದಾರೆಂದ ರೆಡಿಮೆಡ್ ಉತ್ತರವೂ ಸಿಗುತ್ತದೆ.
ಹಣದ ಥೈಲಿಯ ಮುಂದೆ ಇಲ್ಲಿ ಅಗುವ ಕೆಲಸಗಳು ಕಾನೂನಿನಡಿ  ಕೆಲಸ ಕಾರ್ಯಗಳನ್ನು ಯಶಸ್ಸಿಯಾಗಿ ನಡೆಸಿ ಅರ್ಜಿದಾರನೊಬ್ಬ  ಪೈಲ್ ಹಿಡಿದು ಕಚೇರಿಯಿಂದ ಹೊರಬರುವುದೇ ಗಗನಕುಸುಮ ವೆಂದರೂ ತಪ್ಪಾಗಲಾರದು.
ಭ್ರಷ್ಟಾಚಾರ ತುಂಬಿಕೊಂಡಿರುವ ಈ ಕಚೇರಿ ಹಾಗೂ ಅಧಿಕಾರಿಯ ವಿರುದ್ಧ ಕಳೆದ ಒಂದು ವರ್ಷದ ಹಿಂದೆ ಕರ್ನಾಟಕ ಲೋಕಾಯುಕ್ತಕ್ಕೆ ಪತ್ರಕರ್ತರೊಬ್ಬರು ಖುದ್ದಾಗಿ ದೂರು ಸಲ್ಲಿಸಿದ ನಂತರದಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿದ್ದರು. ಆದರೂ ಸುಧಾರಣೆ ಕಾರಣ ಹೋದ ಪರಿಣಾಮವಾಗಿ ಕಮಿಷನರ್ ಬಲೆಗೆ ಬೀಳಬೇಕಾಗಿರುವುದು ವಿಪರ್ಯಾಸವಾಗಿದೆ
.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top