ಮುಡಾರು: ಮಹಿಳೆಯ ವಿರುದ್ದ ಸುಳ್ಳು ಆರೋಪಮಾನನಷ್ಟ ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು

Picture of RB NEWS

RB NEWS

Bureau Report


ಕಾರ್ಕಳ: ಸುಳ್ಳು ಆರೋಪ ಹೊರಿಸಿ, ಘನತೆಗೆ ಧಕ್ಕೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದOತೆ ಮಾನನಷ್ಟ ಪರಿಹಾರ ನೀಡುವಂತೆ ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಮಹತ್ತರವಾದ ತೀರ್ಪು ಪ್ರಕಟಿಸಿದೆ.
ಆಗಿದ್ದೇನು ?
ಮಾಳ ಗ್ರಾಮದ ನಿವಾಸಿ ಚಂದ್ರಾವತಿ ಮತ್ತು ಆಕೆಯ ಪತಿ ಮೋನಪ್ಪ ಗೌಡ, ಮುಡಾರು ಗ್ರಾಮದ ಲಕ್ಷಿö್ಮÃ ಎಂಬವರ ಮನೆಯಲ್ಲಿ ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಆದರೆ ಕೆಲವು ಸಮಯದ ಬಳಿಕ ಮನೆ ಮಾಲಕಿ ಲಕ್ಷಿö್ಮÃ ಅವರು, ಕೆಲಸದಾಳುಗಳು ತೋಟದಲ್ಲಿ ಅಡಕೆ ಕದಿಯುತ್ತಾರೆ, ಮಾತ್ರವಲ್ಲ ತನ್ನ ಪತಿ ಮತ್ತು ಚಂದ್ರಾವತಿ ನಡುವೆ ಅನೈತಿಕ ಸಂಬAಧವಿದೆ ಎಂದು ಆಪಾದಿಸಿ, ಇದೇ ವಿಚಾರವನ್ನು ಮುಂದಿಟ್ಟುಕೊAಡು ತನ್ನ ಮಗಳು ಆರತಿ ಅಶೋಕ್ ಮೂಲಕ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ವಿಚಾರಣೆ ವೇಳೆ ದೂರು ಅರ್ಜಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂಬ ಕಾರಣಕ್ಕೆ ಅಂದಿನ ಠಾಣಾಧಿಕಾರಿಗಳು ಪ್ರಕರಣ ಮುಕ್ತಾಯಗೊಳಿಸಿದ್ದರು.
ನ್ಯಾಯಾಲಯಕ್ಕೆ ಮೊರೆ
ಲಕ್ಷಿö್ಮÃ ಮತ್ತು ಆಕೆಯ ಮಗಳು ಆರತಿ ಆಶೋಕ್ ನೀಡಿದ ಸುಳ್ಳು ದೂರಿನ ಪರಿಣಾಮ ನನ್ನ ಘನತೆಗೆ ಧಕ್ಕೆಯಾಗಿದ್ದು ಮಾತ್ರವಲ್ಲ, ಸಮಾಜದಲ್ಲಿ ನಮ್ಮನ್ನು ಅನುಮಾನಾಸ್ಪದವಾಗಿ ನೋಡಿಕೊಳ್ಳುತ್ತಿದ್ದಾರೆ. ಪರಿಣಾಮ ಮಗಳ ಮದುವೆಗೂ ಅಡ್ಡಿಯಾಗುತ್ತಿದೆ ಎಂದು ತನಗಾಗಿರುವ ಮಾನನಷ್ಟಕ್ಕೆ ಚಂದ್ರಾವತಿ, ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪರಿಹಾರ ಕೇಳಿ ವ್ಯಾಜ್ಯ ಸಲ್ಲಿಸಿದ್ದರು. ಸದ್ರಿ ವ್ಯಾಜ್ಯದಲ್ಲಿ ನ್ಯಾಯಾಲಯವು ವಿಚಾರಣೆ ನಡೆಸಿ, ಲಕ್ಷಿö್ಮÃ ಮತ್ತು ಆಕೆಯ ಮಗಳು ಆರತಿ ಆಶೋಕ್ ಇಬ್ಬರು ಸೇರಿಕೊಂಡು, ಎರಡು ತಿಂಗಳ ಗಾಗಿ ಚಂದ್ರಾವತಿಯವರಿಗೆ ಮಾನನಷ್ಟ ಪರಿಹಾರ ಹಾಗೂ ದಾವೆಯ ಖರ್ಚು ಸಹಿತ ಒಟ್ಟು 43,420 ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ. ಚಂದ್ರಾವತಿ ಅವರ ಪರವಾಗಿ ನ್ಯಾಯವಾದಿ ರವೀಂದ್ರ ಮೊಯ್ಲಿ ಕಾರ್ಕಳ ವಾದಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top