ಮುಂಬಯಿ: ತುಳು ಲಿಪಿ ಅಕ್ಷರಾಭ್ಯಾಸ ವರ್ಗ
ಮುಂಬಯಿ : ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಹೆರ್ಮುಂಡೆ, ಕಾರ್ಕಳ ತಾಲೂಕು, ಉಡುಪಿ ಇದರ ಮುಂಬಯಿ ಶಾಖೆಯ ಉದ್ಘಾಟನೆ ಮತ್ತು ತುಳು ಲಿಪಿ ಅಕ್ಷರಾಭ್ಯಾಸ ವರ್ಗದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಹೆರ್ಮಂಡೆ ಇದರ ಶಾಖೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಸಮಿತಿಯ ಅಧ್ಯಕ್ಷೆ ಪ್ರೊ. ಮಿತ್ರ ಪ್ರಭಾ ಹೆಗ್ಡೆಯವರು ಗಣ್ಯರ ಸಮ್ಮುಖದಲ್ಲಿ ನೆರವೇರಿಸಿದರು.
ಆ ಬಳಿಕ ಸಭಾ ಕಾರ್ಯಕ್ರಮವನ್ನು ನವೋದಯ ಕನ್ನಡ ಸೇವಾ ಸಂಘ (ರಿ.) ಥಾಣೆ ಇವರ ಸಂಚಾಲಿತ ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನ ಸಭಾಗೃಹದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಲಾಯಿತು.
ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷ ಸತೀಶ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಕಾಶ್ ಆಳ್ವ, ಗೌರವ ಅಧ್ಯಕ್ಷರು ತುಳು ಕೂಟ ಐರೋಲಿ, ಮನೋಜ್ ಎಲ್. ಹೆಗ್ಡೆ, ಅಧ್ಯಕ್ಷರು ಹೆಗ್ಗಡೆ ಸೇವಾ ಸಂಘ (ರಿ.) ಮುಂಬಯಿ, ಸುರೇಂದ್ರ ಕುಮಾರ್ ಶೆಟ್ಟಿ, ಮಾರ್ನಾಡು, ಮುಂಬಯಿ ಸಂಚಾಲಕರು ಟೀಮ್ ಐ ಲೇಸಾ, ಜಯರಾಮ ಪೂಜಾರಿ, ಅಧ್ಯಕ್ಷರು ಶ್ರೀ ಅಯ್ಯಪ್ಪ ಸೇವಾ ಸಮಿತಿ (ರಿ.) ಕಿಸನ್ ನಗರ, ನಯನ ಶೆಟ್ಟಿ, ಕಾರ್ಯಧ್ಯಕ್ಷರು ಮಹಿಳಾ ವಿಭಾಗ, ಕನ್ನಡ ಸೇವಾ ಸಂಘ (ರಿ.) ಥಾಣೆ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೊ. ಮಿತ್ರಪ್ರಭಾ ಹೆಗ್ಡೆಯವರಿ ಶಿಷ್ಯ ವೃಂದದವರು ಪೂರ್ಣ ಕುಂಭ ಸ್ವಾಗತ ನೀಡಿ, ಸನ್ಮಾನಿದರು.
ಇದೇ ಸಂದರ್ಭದಲ್ಲಿ ನವೋದಯ ಕನ್ನಡ ಸೇವಾ ಸಂಘ (ರಿ.) ಥಾಣೆ ಇದರ ಸ್ಥಾಪಕ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷ ಕೆ. ಎಸ್. ಬಂಗೇರ, ಮಾಜಿ ಅಧ್ಯಕ್ಷ ಜಯ ಕೆ. ಶೆಟ್ಟಿ, ಪದಾಧಿಕಾರಿಗಳಾದ ಶಶಿಧರ ಶೆಟ್ಟಿ, ಸುನಿಲ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೇಖರ ಹೆಗ್ಡೆ, ದಯಾನಂದ ಹೆಗ್ಡೆ, ಮಹಿಳಾ ವಿಭಾಗದ ರೇಣುಕಾ ಜಯನಂದ ದೇವಾಡಿಗ, ಮಾದ್ಯಮ ಮತ್ತು ಸಂವಹನ ವಿಭಾಗದ ಮನೋಜ್ ಶೆಟ್ಟಿ ನಕ್ರೆ ಉಪಸ್ಥಿತರಿದ್ದರು.
ಮೇಘ ಬಂಗೇರ, ಆರ್ಯನ್ ದೇವಾಡಿಗ, ನಿರೇಶ್ ಪೂಜಾರಿ ಪ್ರಾರ್ಥನೆಗೈದರು. ಪ್ರತಿಭಾ ಶೆಟ್ಟಿ ಸ್ವಾಗತಿಸಿದರು. ಪ್ರವೀಣಿ ಸಾಲ್ಯಾನ್ ಮುಖ್ಯ ಅತಿಥಿಗಳ ಪರಿಚಯಿಸಿದರು.
ಪುಷ್ಪ ದೇವಾಡಿಗ ತುಳು ಲಿಪಿ ಅಕ್ಷರಾಭ್ಯಾಸ ಸಾಧಕರ ಅಭಿನಂದನೆಯ ನಿರ್ವಹಣೆ, ಸಿ. ಎ. ರಾಜಶ್ರೀ ಶೆಟ್ಟಿ ತುಳು ಲಿಪಿ ಕಲಿಕಾ ಅವಧಿಯ ಅನುಭವ, ಡಾ. ಪೂರ್ಣಿಮಾ ಶೆಟ್ಟಿಯವರು ತಮ್ಮ ಗುರುಗಳ ಸನ್ಮಾನ ಕಾರ್ಯಕ್ರಮದ ನಿರ್ವಹಿಸಿದರು. ಶೋಭ ಶೆಟ್ಟಿ ಧನ್ಯವಾದವಿತ್ತರು.
ಸುಗಂಧಿ ಹೆಗ್ಡೆ ನಿರೂಪಿಸಿದರು.














