ಮೀನು ಸಾಗಾಟ ಲಾರಿ ಪಲ್ಟಿ

ಕಾರ್ಕಳ: ನಗರ ಸಂಪರ್ಕಿಸುವ ಪುಲ್ಕೇರಿ ಬೈಪಾಸ್ ಬಳಿ ಮೀನಿನ ಲಾರಿ ಪಲ್ಟಿ ಹೊಡೆದಿದೆ.
ಪ್ರತಿದಿನದಂತೆ ಗುರುವಾರ ಸಂಜೆಯಂದು ಪಡುಬಿದ್ರಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮೀನು ಸಾಗಾಟದ ಲಾರಿ ಅತೀ ವೇಗವಾಗಿ ಸಾಗಿ ಬಂದು ಸರ್ಕಲ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುತ್ತದೆ.
ಮೀನು ಸಾಗಾಟದ ನೆಪದಲ್ಲಿ ಅತೀ ವೇಗ ಹಾಗೂ ನಿರ್ಲಲ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿದ ಲಾರಿ ಚಾಲಕನ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.






































