ಮೀನು ಕಳವು ಆರೋಪ : ಮಲ್ಪೆಯಲ್ಲಿ ದಲಿತ ಮಹಿಳೆಗೆ ಹಲ್ಲೆ; ಆರೋಪಿಗಳ ಬಂಧನ

Picture of RB NEWS

RB NEWS

Bureau Report

ಉಡುಪಿ, ಮಾರ್ಚ್ 19: ಕೇವಲ ಮೀನು ಕದ್ದ ಕಾರಣಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಅಮಾನವೀಯ ಘಟನೆ ಉಡುಪಿಯ ಮಲ್ಪೆ ಮೀನುಗಾರಿಕ ಬಂದರಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇವಲ ಮೀನು ಕದ್ದ ಆರೋಪದ ಹಿನ್ನಲೆ ವಿಜಯನಗರ ಜಿಲ್ಲೆಯ ದಲಿತ ಮಹಿಳೆಗೆ ತಂಡವು ಕಪಾಳ ಮೋಕ್ಷಗೈದು ಅಮಾನವೀಯವಾಗಿ ವರ್ತಿಸಿತು.

ಘಟನೆಯ ಸಂದರ್ಭದಲ್ಲಿ ಅಸಂಖ್ಯಾತರು ನೆರೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಕದ್ದ ಆರೋಪದ ಮೇಲೆ ತಂಡದಿಂದ ಥಳಿತಕ್ಕೊಳಗಾದ ಮಹಿಳೆಯನ್ನು ಲಕ್ಷ್ಮೀ ಬಾಯಿ ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬರು ಮೊದಲಿಗೆ ಕೆನ್ನೆಗೆ ಬಾರಿಸುತ್ತಾ , ಅವಾಚ್ಯ ಶಬ್ದಗಳಿಂದ ನಿಂದಿಸಿತ್ತಿದ್ದ ಘಟನಾವಳಿ ವಿಡಿಯೋವೊಂದರಲ್ಲಿ ದಾಖಲಾಗಿದ್ದರೆ, ಮತ್ತೊಂದು ವಿಡಿಯೋದಲ್ಲಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ದೃಶ್ಯಾವಳಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸುಂದರ್, ಶಿಲ್ಪ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top