ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ : ಚಪ್ಪರ ಮುಹೂರ್ತ
ಕಾರ್ಕಳ : ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದ ಪ್ರಯುಕ್ತವಾಗಿ ಡಿ.21ರ ಬೆಳಿಗ್ಗೆ 10.30 ಘಂಟೆಯ ಶುಭಲಗ್ನದಲ್ಲಿ ಚಪ್ಪರ ಮುಹೂರ್ತವನ್ನು ಬೆಳ್ಮಣ್ಣು ಗುರುರಾಜ್ ತಂತ್ರಿಗಳು ನೆರವೇರಿಸಿಕೊಟ್ಟರು.


ಇದೇ ಸಂದರ್ಭದಲ್ಲಿ ಭಗವದ್ ಧ್ವಜವನ್ನು ಅಲಂಕಾರ ಸಮಿತಿಯ ಸಂಚಾಲಕರಿಗೆ ಹಸ್ತಾಂತರಿಸಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬಿ. ಗಣಪತಿ ಹೆಗ್ಡೆ ಬೋರ್ಕಟ್ಟೆ,ಪೂನ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿ ಮಂಜೆ ಮನೆ, ಮಾಧವ ಕಾಮತ್, ಸತ್ಯೇಂದ್ರ ಕಾಮತ್, ಕಿಶೋರ್ ಶೆಟ್ಟಿ, ಊರ ಹಿರಿಯರು ಮತ್ತು ಎಲ್ಲಾ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.






































