ಮಿಯ್ಯಾರು ಶ್ರೀ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ : ಜ.17 ರಿಂದ ಜ.28 ದಂದು ಬ್ರಹ್ಮಕಲಶೋತ್ಸವ
RB NEWS
Bureau Report
ಕಾರ್ಕಳ : ಮಿಯ್ಯಾರು ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.17ರಿಂದ ಜ.28ರ ತನಕ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಶ್ರೀದೇವರ ಬ್ರಹ್ಮಕಲಶೋತ್ಸವ ದಿನವನ್ನು ದೇವಸ್ಥಾನದ ತಂತ್ರಿಗಳು ಹಾಗೂ ಅರ್ಚಕರು ದಿನಾಂಕ 17.01.2025 ರಿಂದ ದಿನಾಂಕ 28.01.2025 ರವರೆಗೆ ಎಂದು ಭಕ್ತ ಸಮೂಹದ ಸಮ್ಮುಖದಲ್ಲಿ ನಿಗದಿಪಡಿಸಲಾಗಿದೆ.
ಅದರಂತೆ ಮಾಗಣೆಯ ಭಕ್ತ ವೃಂದಕ್ಕೆ ಕೆಲವು ರೀತಿ ನೀತಿ ಕಟ್ಟಳೆಗಳನ್ನು ಕೂಡ ಸೂಚಿಸಿರುತ್ತಾರೆ. ಅದರಂತೆ ಇಂದಿನಿಂದ ಆರಂಭಗೊಂಡು ಪ್ರತಿದಿನ ಸಂಜೆ 5:30ಕ್ಕೆ ಸರಿಯಾಗಿ ದೇವಸ್ಥಾನದಲ್ಲಿ ಶ್ರೀ ದೇವರ ಬೀಜಾಕ್ಷರಿ ಮಂತ್ರ ಪಠಣ ನಡೆಯಲಿದೆ. ಆದ್ದರಿಂದ ಮಾಗಣೆಯ ಎಲ್ಲಾ ಭಕ್ತಾಭಿಮಾನಿಗಳು ಸಂಜೆಯ ಮಂತ್ರ ಪಠಣ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.