
ಮಿಯ್ಯಾರು ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ: ಸಮಿತಿ ರಚನೆ


ಕಾರ್ಕಳ : ಮಿಯ್ಯಾರು ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನವರಿ 17 ರಿಂದ 28 ರ ವರೆಗೆ ದೇಗುಲದ ಬ್ರಹ್ಮಕಲಶೋತ್ಸವ ನಡೆಯಲಿದೆ.
ಆ ಪ್ರಯುಕ್ತ ರವಿವಾರ ಪೂರ್ವಾಹ್ನ 10.30 ಘಂಟೆಗೆ ಬ್ರಹ್ಮ ಕಲಶೋತ್ಸವ ಸಮಿತಿಯನ್ನು ರಚಿಸುವ ಬಗ್ಗೆ ಸಭೆಯನ್ನು ಕರೆಯಲಾಗಿತ್ತು.
ಮಾಗಣೆ ಗ್ರಾಮದ ಭಕ್ತಾಭಿಮಾನಿಗಳು ಪಾಲ್ಗೊಂಡು ಹೆಸರನ್ನು ಸ್ವ ಇಚ್ಚೆಯಿಂದ ನಮೂದಿಕೊಂಡರು.
ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಅವೆಲ್ಲವೂ ಜರಗುವ ವಿಧಿ,ವಿಧಾನಗಳು ಹಾಗೂ ನಿಭಾಯಿಸುವ ವ್ಯಕ್ತಿಗಳಿಗೆ ಜವಾಬ್ದಾರಿ ಹುದ್ದೆಗಳನ್ನು ನೀಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಗಣಪತಿ ಹೆಗ್ಡೆ, ಕಮಲಾಕ್ಷ ಕಾಮತ್, ಆನಂದ ಶೆಟ್ಟಿ ಮಂಜೆಮನೆ, ವಿಜಯ ಶೆಟ್ಟಿ ಕಟ್ಟಣಿಗೆ ಮನೆ, ರಾಜುಶೆಟ್ಟಿ ರಾಯಿ ಮನೆ, ಹರಿದಾಸ ಭಟ್ಟ ಅರ್ಚಕರು, ರಾಘವೇಂದ್ರ ಭಟ್ಟ ಊರ ಆಸ್ರಣ್ಷರು, ಜಯಕೀರ್ತಿ ಕಡಂಬ ಇರ್ವತ್ತೂರು ಉಪಸ್ಥಿತರಿದ್ದರು.







































