

ಮಿಯ್ಯಾರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಸುನೀಲ್
ಕಾರ್ಕಳ : ಜೀರ್ಣೋದ್ದಾರಗೊಳ್ಳುತ್ತಿರುವ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ರವಿವಾರ ಸಂಜೆ ವೇಳೆಗೆ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾಗಿರುವ ಕಾರ್ಕಳದ ಶಾಸಕ ವಿ. ಸುನೀಲ್ ಕುಮಾರ್ ಆಗಮಿಸಿ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.



ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಗಣಪತಿ ಹೆಗ್ಡೆ ,ಕೋಶಾಧಿಕಾರಿ ಸತ್ಯೇಂದ್ರ ನಾಯಕ್, ಹಿರಿಯರಾದ ಮಾಧವ ಕಾಮತ್, ಸಮಿತಿಯ ಸದಸ್ಯರಾದ ಪಾರ್ಶನಾಥ್ ಜೈನ್,ರೋಹಿತ್ ಕುಮಾರ್,ಸುಕೀರ್ತಿ ಶೆಟ್ಟಿ, ಸುಧಾಕರ್ ನಾಯ್ಕ್, ವೀಣಾ ನಾಯಕ್ ಮತ್ತು ರಾಮ್ ದಾಸ್ ನಾಯಕ್,ದಯಾನಂದ ಬಂಗೇರ,ರಮೇಶ್ ಹೆಗ್ಡೆ, ಕರುಣಾಕರ್ ಶೆಟ್ಟಿ, ಮೇಘನ್ ರಾಜ್ ಇತರರು ಇದ್ದರು.











































